Connect with us

FILM

ಟೈಗರ್ 3 ಚಿತ್ರದ ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಸಲ್ಮಾನ್​ ಫ್ಯಾನ್ಸ್ ಹುಚ್ಚಾಟ,ಧಿಕ್ಕಾಪಾಲಾಗಿ ಓಡಿದ ಪ್ರೇಕ್ಷರಲ್ಲಿ ಅನೇಕರು ಗಾಯ..!

ಮುಂಬೈ: ಬಹು ನಿರೀಕ್ಷಿತ ಸಲ್ಮಾನ್ ಖಾನ್ ರ ಚಿತ್ರ ಟೈಗರ್​ 3 (Tiger 3) ಬಿಡುಗಡೆಯಾಗಿದ್ದು ಬಾಕ್ಸ್​ ಆಫೀಸನ್ನು ಚಿಂದಿ ಮಾಡಿದೆ. ಯಶರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸಲ್​ನ ಭಾಗವಾಗಿರುವ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ದೀಪಾವಳಿ ಉಡುಗೊರೆಯಾಗಿ ಭಾನುವಾರ ಪ್ರೇಕ್ಷಕರ ಮುಂದೆ ಬಂದಿದೆ.

ಚಿತ್ರಮಂದಿರಗಳಲ್ಲಿ ಗಿಜಿಗುಡುವ ವಾತಾವರಣ ನಿರ್ಮಾಣವಾಗಿದೆ. ಆದರೆ ಕೆಲವು ಹುಚ್ಚು ಅಭಿಮಾನಿಗಳು ಥಿಯೇಟರ್​ನಲ್ಲಿ ಅತಿರೇಕವಾಗಿ ವರ್ತಿಸಿ ಕೆಲವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಪ್ರಯತ್ನ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಕೆಲವು ಅಭಿಮಾನಿಗಳು ಮಹಾರಾಷ್ಟ್ರದ ಮಾಲೆಗಾಂವ್ ಥಿಯೇಟರ್‌ನಲ್ಲಿ ಸಂಭ್ರಮದ ಹೆಸರಲ್ಲಿ ಹುಚ್ಚಾಟ ಪ್ರದರ್ಶಿಸಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಎಂಟ್ರಿ ವೇಳೆ ಥಿಯೇಟರ್ ನಲ್ಲಿ ದೊಡ್ಡ ಮಟ್ಟದ ಪಟಾಕಿ ಹೊಡೆದಿದ್ದಾರೆ. ಈ ಪಟಾಕಿಗಳು ಚೆಲ್ಲಾಪಿಲ್ಲಿಯಾಗಿ ಜನರ ಮಧ್ಯೆ ಸಿಡಿದಿವೆ.

ಈ ಅನಿರೀಕ್ಷಿತ ಕೃತ್ಯದಿಂದ ಗಾಬರಿಗೊಂಡ ಪ್ರೇಕ್ಷಕರು ಅಲ್ಲಿಂದ ಎದ್ನೋ ಬಿದ್ನೋ ಎಂದು ಓಡಲು ಶುರು ಮಾಡಿದ್ದಾರೆ.ಇನ್ನು ಪಟಾಕಿ ಸಿಡಿಯುತ್ತಿದ್ದಂತೆ, ಸಿನಿಮಾ ನೋಡಲು ಬಂದ ಪ್ರೇಕ್ಷಕ ದಿಕ್ಕಾಪಾಲಾಗಿ ಓಡಿದ್ದಾರೆ. ಇದೇ ವೇಳೆ ಕಾಲ್ತುಳಿತವೂ ಸಂಭವಿಸಿದೆ. ಸಾಕಷ್ಟು ಮಂದಿಗೆ ಗಾಯಗಳಾಗಿವೆ ಎಂದೂ ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ನೋಡಿದ ಹಲವು ನೆಟ್ಟಿಗರು ಅಭಿಮಾನಿಗಳ ಅತಿರೇಕದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಹಾಗೂ ಥಿಯೇಟರ್ ಆಡಳಿತ ಮಂಡಳಿಗೆ ತೊಂದರೆ ನೀಡುತ್ತಿರುವ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಸಲ್ಮಾನ್ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲೂ ಇಂತಹ ಘಟನೆಗಳು ನಡೆದಿದ್ದವು. ಇಂತಹ ಘಟನೆಗಳ ಬಗ್ಗೆ ಸಲ್ಮಾನ್ ಕೂಡ ಅಸಹನೆ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *