Connect with us

    FILM

    ‘ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದು’; ಬಾಲಿವುಡ್ ನಟ ಸಲ್ಮಾನ್​ ಖಾನ್​ಗೆ ಮತ್ತೆ ಜೀವ ಬೆದರಿಕೆ, ಮುಂಬೈ ಪೊಲೀಸರಿಗೆ ಸಂದೇಶ ರವಾನೆ..!

    ಮುಂಬೈ : 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ  ಭಾಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ (Salman khan)  ಪ್ರಕರಣ ನಡೆದು 25 ವರ್ಷಗಳು ಸಂದರೂ ಇನ್ನೂ ಬೇತಾಳದಂತಿದ್ದು ಬೆನ್ನು ಬಿಡುತ್ತಿಲ್ಲ. ಇದಕ್ಕಾಗಿಯೇ  ಕುಖ್ಯಾತ  ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸಲ್ಮಾನ್ ಖಾನ್‌ನ್ನು ಕೊಲ್ಲುವುದಾಗಿ  ಶಪಥ ಹಾಕಿದ್ದು 60 ಶಾರ್ಪ್ ಶೂಟರ್‌ಗಳನ್ನು ನೇಮಕ ಮಾಡಿದೆ ಎನ್ನಲಾಗಿದೆ.

    ಸಲ್ಮಾನ್ ಖಾನ್ ಆಪ್ತ ಮಹಾರಾಷ್ಟ್ರ ಮಾಜಿ ಸಚಿವ ಸಿದ್ದಿಕಿಯನ್ನು ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಗುಂಡು ಹಾರಿಸಿ ಹತ್ಯೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಭದ್ರತೆ ಇನ್ನೂ ಹೆಚ್ಚಿಸಲಾಗಿದೆ.  ಈ ಮಧ್ಯೆ ಇದೀಗ ಮತ್ತೆ ಸಲ್ಮಾನ್​ ಖಾನ್​ಗೆ ಜೀವ ಬೆದರಿಕೆ ಬಂದಿದೆ. ಐದು ಕೋಟಿ ಹಣ ಕೊಡಿ ಇಲ್ಲವಾದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆರೋಪಿಯೊಬ್ಬ ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ.ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಅವರು 5 ಕೋಟಿ ರೂ. ಕೊಡಿ, ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್​ ಖಾನ್​ ಪರಿಸ್ಥಿತಿ ಬಾಬಾ ಸಿದ್ದಿಕಿಗಿಂತಲೂ ಕೆಟ್ಟದಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಬಾಲಿವುಡ್ ಸೂಪರ್​ಸ್ಟಾರ್ ಸಲ್ಮಾನ್​ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಲಾರೆನ್ಸ್​ ಬಿಷ್ಣೋಯ್ 60 ಶೂಟರ್​ಗಳನ್ನು ನೇಮಿಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಹಲವು ವರ್ಷಗಳಿಂದ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು.ಲಾರೆನ್ಸ್ ಸೇರಿರುವ ಬಿಷ್ಣೋಯ್ ಸಮುದಾಯವು ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುತ್ತದೆ.

    ಇದು ಲಾರೆನ್ಸ್ ಬಿಷ್ನೋಯ್ ​ ಅಸಮಾಧಾನಕ್ಕೆ ಮೂಲ ಕಾರಣವೆಂದೇ ಹೇಳಬಹುದು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್‌ಗೆ ಅನೇಕ ಬಾರಿ ಬೆದರಿಕೆಗಳನ್ನು ಹಾಕಿದೆ. ಗ್ಯಾಂಗ್ 60 ಶೂಟರ್​ಗಳನ್ನು ನೇಮಿಸಿಕೊಂಡಿದ್ದು, ಖಾನ್ ಸುರಕ್ಷತೆ ಕುರಿತು ಗಂಭೀರ ಕಳವಳ ಉಂಟಾಗಿದೆ. ಈಗಾಗಲೇ ಪದೇ ಪದೇ ಬೆದರಿಕೆಯೊಡ್ಡುತ್ತಿರುವುದರಿಂದ ಸಲ್ಮಾನ್ ಖಾನ್ ಸುತ್ತ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಲ್ಮಾನ್​ ಖಾನ್​ಗೆ ನಿಕಟವಾಗಿದ್ದ, ಮಹಾರಾಷ್ಟ್ರ ಮಾಜಿ ಸಚಿವ ಸಿದ್ದಿಕಿಯನ್ನು ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಗುಂಡು ಹಾರಿಸಿ ಹತ್ಯೆ ಮಾಡಿತ್ತು.

    Share Information
    Advertisement
    Click to comment

    Leave a Reply

    Your email address will not be published. Required fields are marked *