BELTHANGADI
ಬೆಳಲು ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ಕಾಣಿಸಿಕೊಂಡ ನಾಗರಹಾವು
ಬೆಳಲು ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ಕಾಣಿಸಿಕೊಂಡ ನಾಗರಹಾವು
ಬೆಳ್ತಂಗಡಿ ಮೇ 16: ಸುಮಾರು 600 ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಲು ಅನಂತ ಪದ್ಮನಾಭ ದೇವಸ್ಥಾನದಲ್ಲೊಂದು ಪವಾಡ ನಡೆದಿದೆ. ದೇವರ ಬಿಂಬ ಪ್ರತಿಷ್ಠಾಪನೆಗೂ ಮುನ್ನವೇ ನಾಗರಹಾವು ಕಾಣಿಸಿಕೊಂಡಿದೆ.
ಬೆಳಾಲು ಗ್ರಾಮದಲ್ಲಿರುವ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಈಗ ಜಿರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು. ಈ ಕಾರ್ಯಕ್ರಮ ಸಂದರ್ಭದಲ್ಲಿ ನಾಗರ ಹಾವು ಕಾಣಿಸಿಕೊಂಡು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.
ಸುಮಾರು 600 ವರ್ಷಗಳ ಇತಿಹಾಸ ಇರುವ ಈ ಅನಂತೋಡಿ, ಬೆಳಾಲು ಗ್ರಾಮದ ಈ ದೇವಸ್ಥಾನದಲ್ಲಿ ಜಿರ್ಣೋದ್ದಾರ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅಶ್ಲೇಷ ಪೂಜೆ ವಿಜೃಂಭಣೆಯಿಂದ ನಡೆಸಲಾಗಿತ್ತು. ಬಾಲಾಲಯದಲ್ಲಿದ್ದ ದೇವರ ಮೂರ್ತಿಗಳನ್ನು ನವೀಕರಣಗೊಂಡ ಕ್ಷೇತ್ರದ ಒಳಗೆ ಕೊಂಡೊಯ್ಯುವ ಸಂದರ್ಭದಲ್ಲಿ ನಾಗರ ಹಾವು ಕಾಣಸಿಕ್ಕಿದ್ದು ಎಲ್ಲರಲ್ಲಿ ಆಶ್ಚರ್ಯ ಉಂಟುಮಾಡಿದೆ.
ಅಲ್ಲದೆ ಸ್ಥಳೀಯರ ಪ್ರಕಾರ ಜಿರ್ಣೋದ್ದಾರ ಸಂದರ್ಭದಲ್ಲಿ ಈ ನಾಗರಹಾವು ಕ್ಷೇತ್ರದ ಸುತ್ತಲೂ ತಿರುಗುತ್ತಿದ್ದ ಕ್ಷೇತ್ರದಲ್ಲಿ ಇಂದು ಬಿಂಬ ಪ್ರತಿಷ್ಠಾಪನೆ ನಡೆಯಲಿದ್ದು, ಬಿಂಬ ಪ್ರತಿಷ್ಠಾಪನೆಗೆ ಮುಂಚೆಯೇ ನಾಗರಹಾವು ಕಾಣಿಸಿಕೊಂಡಿದೆ. ಅಲ್ಲದೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಗದ್ದಲದ ನಡುವೆಯೇ ನಾಗರ ಹಾವು ಕಾಣಿಸಿಕೊಂಡಿದ್ದು, ನೆರೆದಿದ್ದವರಲ್ಲಿ ಆಶ್ಚರ್ಯದ ಜೊತೆಗೆ, ಭಯ, ಭಕ್ತಿ ಇನ್ನಷ್ಟು ಹೆಚ್ಚುವಂತೆ ಮಾಡಿದೆ.