FILM
ಬಾಲಿವುಡ್ ನಟ ಮುಕುಲ್ ದೇವ್ ನಿಧನ

ಮುಂಬೈ ಮೇ 24: ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಲನ್ ಆಗಿ ನಟಿಸಿದ್ದ ಖ್ಯಾತ ನಟ ಮುಕುಲ್ ದೇವ್ ನಿಧನರಾಗಿದ್ದಾರೆ.
ಮುಕುಲ್ ದೇವ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಮುಕುಲ್ ಅವರು ‘ಸನ್ ಆಫ್ ಸರ್ದಾರ್’, ‘ಆರ್… ರಾಜ್‌ಕುಮಾರ್’, ‘ಜೈ ಹೋ’ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಕುಲ್ ದೇವ್ ಅವರು ನಟ ಹಾಗೂ ಮಾಡೇಲ್ ರಾಹುಲ್ ದೇವ್ ಅವರ ಸಹೋದರರಾಗಿದ್ದಾರೆ. ಮುಕುಲ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮುಕುಲ್ ದೇವ್ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

Continue Reading