LATEST NEWS
ಅಂತರಾಷ್ಟ್ರೀಯ ಮಟ್ಟದಲ್ಲಿ ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಶಬರಿಮಲೆ ತೀರ್ಪಿನ ವಿರುದ್ಧ ಪ್ರತಿಭಟನೆ
ಮಂಗಳೂರು ಅಕ್ಟೋಬರ್ 08: ದೇಶದಾದ್ಯಂತ ಶಬರಿಮಲೆ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಈ ಪ್ರತಿಭಟನೆ ಬಿಸಿ ಈಗ ಅಂತರಾಷ್ಟ್ರೀಯ ಮಟ್ಟಕ್ಕೂ ಮುಟ್ಟಿದೆ.
ಈ ನಡುವೆ ವಿದೇಶದಲ್ಲೂ ಶಬರಿಮಲೆ ರಕ್ಷಣೆಗೆ ಗೆ ಪ್ರತಿಭಟನೆಗಳು ಆರಂಭವಾಗಿದೆ. ವಿದೇಶದ ನೆಲದ ಮೇಲು ಸ್ವಾಮಿ ಶರಣಂ ಭಜನೆ ಕೇಳಿ ಬಂದಿದೆ. ಆಸ್ಟ್ರೇಲಿಯಾದಲ್ಲೂ ‘ ಸೇವ್ ಶಬರಿಮಲೆ ‘ ಪ್ರತಿಭಟನೆ ಆರಂಭವಾಗಿದೆ.
ಅಯ್ಯಪ್ಪ ವ್ರತಧಾರಿಗಳು ಧರಿಸುವ ಕರಿ ವಸ್ತ್ರಧರಿಸಿದ ನೂರಾರು ಅಯ್ಯಪ್ಪ ಭಕ್ತರು ರಸ್ತೆಗಿಳಿದು ಪ್ರತಿಭನೆ ನಡೆಸಿದ್ದಾರೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲ ಅಗಿದೆ.
ರಸ್ತೆ ಬದಿ ಪ್ಲೆಕಾರ್ಡ್ ಹಾಗು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರುವ ಆಸ್ಟ್ರೇಲಿಯಾದ ಅಯ್ಯಪ್ಪ ಸ್ವಾಮಿ ಭಕ್ತರು, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದ್ದಾರೆ.
ಈ ಕೂಡಲೇ ಕೇರಳ ಸರಕಾ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ.