LATEST NEWS
ಮಹಿಳೆಯರ ಪ್ರವೇಶದ ಹಿನ್ನಲೆ ಶುದ್ದೀಕರಣಕ್ಕಾಗಿ ಶಬರಿಮಲೆ ದೇವಸ್ಥಾನ ಬಂದ್ ?

ಮಹಿಳೆಯರ ಪ್ರವೇಶದ ಹಿನ್ನಲೆ ಶುದ್ದೀಕರಣಕ್ಕಾಗಿ ಶಬರಿಮಲೆ ದೇವಸ್ಥಾನ ಬಂದ್ ?
ಕೇರಳ ಜನವರಿ 2: ಶಬರಿಮಲೆಗೆ ಸನ್ನಿಧಾನಕ್ಕೆ ಇಬ್ಬರು 40 ವರ್ಷ ಮಹಿಳೆಯರು ಪ್ರವೇಶಿಸಿ ಹಿನ್ನಲೆಯಲ್ಲಿ ಶಬರಿಮಲೆ ಸನ್ನಿಧಾನವನ್ನು ಶುದ್ದೀಕರಣಕ್ಕಾಗಿ ಮುಚ್ಚಲಾಗಿದೆ. ಸುಮಾರು 1 ಗಂಟೆಗಳ ಕಾಲ ಈ ಶುದ್ದೀಕರಣ ನಡೆಯಲಿದೆ ಎಂದು ಹೇಳಲಾಗಿದ್ದು. ನಂತರ ದೇವಸ್ಥಾನ ಮತ್ತೆ ತೆರೆಯಲಾಗುವುದು ಎಂದು ಹೇಳಲಾಗಿದೆ.
ಕೇರಳ ಮೂಲದ ಬಿಂದು(42), ಸಿಪಿಐ(ಎಂಎಲ್) ಕಾರ್ಯಕರ್ತೆ ಕನಕದುರ್ಗ ಎಂಬುವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದಾರೆ. ನಿನ್ನೆ ಮಧ್ಯರಾತ್ರಿಯೇ ಶಮರಿಮಲೆ ಹತ್ತಲು ಶುರು ಮಾಡಿದ ಇಬ್ಬರು ಇಂದು ಬೆಳಿಗ್ಗೆ 3.45 ಕ್ಕೆ ದೇವಸ್ಥಾನ ತಲುಪಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

ಈ ಹಿನ್ನಲೆಯಲ್ಲಿ ಇಂದು ಶಬರಮಲೆ ದೇವಸ್ಥಾನದ ಮುಖ್ಯ ತಂತ್ರಿಗಳ ಸಭೆ ನಡೆಸಲಾಗಿದ್ದು, ಮಹಿಳೆಯರ ಪ್ರವೇಶದ ಹಿನ್ನಲೆಯಲ್ಲಿ ದೇವಸ್ಥಾನದ ಶುದ್ದೀಕರಣಕ್ಕಾಗಿ ಶಬರಿಮಲೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಸುಮಾರು 1 ಗಂಟೆಯ ಕಾಲ ಶುದ್ದೀಕರಣ ನಡೆಯಲಿದ್ದು, ಸನ್ನಿಧಾನದ ಶುದ್ದೀಕರಣದ ನಂತರ ದೇವಾಲಯದ ಬಾಗಿಲನ್ನು ತೆಗೆಯಲಾಗುವುದು ಎಂದು ಹೇಳಲಾಗಿದೆ.
ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 40 ವರ್ಷದ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶತಮಾನಗಳ ಸಂಪ್ರದಾಯವನ್ನು ಮುರಿಯಲು ಇಬ್ಬರು ಮಹಿಳೆಯರು ಯಶಸ್ವಿಯಾಗಿದ್ದಾರೆ.