KARNATAKA
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಎಸ್. ಜಾನಕಿ

ಮೈಸೂರ: ಇತ್ತೀಚೆಗೆ ನಿಧನರಾದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ನೆನೆದು ಖ್ಯಾತ ಗಾಯಕಿ ಎಸ್ ಜಾನಕಿ ಬಿಕ್ಕಿಬಿಕ್ಕಿ ಅತ್ತ ಘಟನೆ ಮೈಸೂರಿನಲ್ಲಿ ನಡೆದಿದೆ.
ಸದ್ಯ ಮೈಸೂರಿನಲ್ಲಿರುವ ಮೆಲೋಡಿ ಕ್ವಿನ್ ಎಸ್ ಜಾನಕಿ ಅವರು ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನರಾಗಿ ಎರಡು ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನನಗೆ ಮಾತನಾಡಲು ಹೋದರೆ ಬಾಲು ನೆನೆದು ಕಣ್ಣೀರು ಬರುತ್ತಿತ್ತು. ಇವತ್ತು ಸಮಾಧಾನ ಮಾಡಿಕೊಂಡು ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಆ ಹುಡುಗ ಒಂದು ಸ್ಪರ್ಧೆಯಲ್ಲಿ ಓರಿಜನಲ್ ವಾಯ್ಸ್ ನಲ್ಲಿ ಹಾಡಿದ್ದನ್ನು ಕೇಳಿದ್ದೆ, ಬಹುಮಾನ ವಿತರಿಸಿದ ನಾನು, ಸಿನೆಮಾದಲ್ಲಿ ಹಾಡಿದರೆ ನೀನು ಮುಂದೆ ಬರುತ್ತಿಯಾ ಎಂದಿದ್ದೆ. ಇದನ್ನು ಆತ ಎಲ್ಲಾ ವೇದಿಕೆಗಳಲ್ಲಿ ಜಾನಕಮ್ಮ ಹೇಳಿದ್ದರು ಎಂದು ಸ್ಮರಿಸುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ಮೈಸೂರಿಗೆ ಬಂದಿದ್ದಾಗ ನಮ್ಮ ಮನೆಯಲ್ಲಿ ಊಟ ಮಾಡಿದ್ದರು. ಆಸ್ಪತ್ರೆಗೆ ಹೋದವರು ವಾಪಾಸ್ ಬರಲಿಲ್ಲ ಎಂದು ಕಣ್ಣೀರು ತುಂಬಿಕೊಂಡರು.