Connect with us

LATEST NEWS

ರಷ್ಯಾ–ಉಕ್ರೇನ್ ಯುದ್ದ – ರಷ್ಯಾ ಸೇನೆಯಿಂದ ಕದನ ವಿರಾಮ

ಉಕ್ರೇನ್ ಮಾರ್ಚ್ 5: ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಬಾಂಬ್ ಗಳ ಸುರಿ ಮಳೆ ಸುರಿದಿದ್ದ ರಷ್ಯಾ ಇದೀಗ ಸಡನ್ ಆಗಿ ಕದನ ವಿರಾಮ ಘೋಷಿಸಿದೆ.


ಉಕ್ರೇನ್‌ನ ಮಾರಿಯುಪೋಲ್‌ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆ ಇಂದು ಬೆಳಗ್ಗೆ ಕದನ ವಿರಾಮ ಘೋಷಿಸಿದೆ. ಈ ಮೂಲಕ ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ನಾಗರಿಕರು ನಗರದಿಂದ ಹೊರ ಹೋಗಲು ಸೇನೆ ಅವಕಾಶ ಮಾಡಿಕೊಟ್ಟಿದೆ.


ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುವ ಮಾರಿಯುಪೋಲ್‌ ಮೇಲೆ ರಷ್ಯಾ ಕೆಲವು ದಿನಗಳಿಂದ ನಿರಂತರ ದಾಳಿ ಕೈಗೊಂಡಿತ್ತು. ನಗರಕ್ಕೆ ನೀರು, ವಿದ್ಯುತ್‌ ಕಡಿತಗೊಂಡು, ಜನ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ, ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್‌ ಮೇಯರ್‌ ಆಗ್ರಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *