LATEST NEWS
ಲಂಚ ಸ್ವೀಕರಿಸಿದ್ದ ಜೈಲರ್ ಈಗ ಜೈಲು ಪಾಲು
ಲಂಚ ಸ್ವೀಕರಿಸಿದ್ದ ಜೈಲರ್ ಈಗ ಜೈಲು ಪಾಲು
ಮಂಗಳೂರು ಫೆಬ್ರವರಿ 8: ಅಸೌಖ್ಯಗೊಂಡ ಖೈದಿಯನ್ನು ಆಸ್ಪತ್ರೆಗೆ ಸೇರಿಸಲು ಲಂಚ ಸ್ವೀಕರಿಸಿದ್ದ ಜೈಲರ್ ಈಗ ಜೈಲು ಪಾಲಾಗಲಿದ್ದಾರೆ.
2011ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಮಂಗಳೂರು ಕಾರಾಗೃಹದ ಪ್ರಭಾರ ಜೈಲು ಉಪಾಧೀಕ್ಷಕರಾಗಿದ್ದ ಜೈಲರ ಕೆ.ಬಿ ತಿಪ್ಪಾ ನಾಯ್ಕ ಎಂಬವರು ಅಸೌಖ್ಯಗೊಂಡ ಕೈದಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಪ್ರಮೋದ್ ಆಳ್ವ ಎಂಬವರಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ 3-1-2011ರಂದು ಲಂಚದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಜೈಲರ್ ಕೆ.ಬಿ ತಿಪ್ಪಾ ನಾಯ್ಕ ಎಂಬವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.ತಿಪ್ಪಾ ನಾಯ್ಕ ಅವರು ಈಗ ನಿವೃತ್ತರಾಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಅವರು ಇಂದು ಶಿಕ್ಷೆ ಪ್ರಕಟಿಸಿದ್ದಾರೆ. ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 3,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 3,000/- ದಂಡ ವಿಧಿಸಿದ್ದಾರೆ.
ಮಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ ಯವರು, ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ ಕಳೆದ ಏಳು ತಿಂಗಳಲ್ಲಿ ಸತತ ಒಟ್ಟು 12 ಲೋಕಾಯುಕ್ತ ಪ್ರಕರಣಗಳಲ್ಲಿ 10 ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.