ಮಂಗಳೂರು ಅಗಸ್ಟ್ 16 : ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂರು ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ ಬಂಧಿತರನ್ನು ರಿಯಾಜ್ ಪರಂಕಿ, ಸಿದ್ದಿಕ್ ನೆಲ್ಯಾಡಿ ಹಾಗೂ ಕಲೀಂ ಎಂದು ಗುರುತಿಸಲಾಗಿದೆ .

ರಿಯಾಜ್ ಪರಂಗಿ ಹಾಗೂ ಸಿದ್ದಿಕ್ ನೆಲ್ಯಾಡಿ ಬೆಳ್ತಂಗಡಿಯವರಾಗಿದ್ದು ಕಾಮರಾಜ ನಗರದ ನಿವಾಸಿ ಎಂದು ಹೇಳಲಾಗಿದೆ .ಈ ಮೂರು ಮಂದಿ ಆರೋಪಿಗಳು ಶರತ್ ಮಡಿವಾಳ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ ಆರೋಪಿ ಗಳಿಗೆ ಪರಾರಿಯಾಗಲು ಹಾಗೂ ಅಡಗಿ ಕುಳಿತು ಕೊಳ್ಳಲು ಸಹಾಯ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ .

ಕೃತ್ಯ ಎಸಗಿದ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೂ ಪೊಲೀಸರು ತಂತ್ರಗಾರಿಕೆ ರೂಪಿಸಿದ್ದಾರೆ .ಈ ನಡುವೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಯು ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.

0 Shares

Facebook Comments

comments