Connect with us

DAKSHINA KANNADA

RSS ಕಾರ್ಯಕರ್ತ ಶರತ್ ಹತ್ಯೆ ಪ್ರಕರಣ – ಅಗಸ್ಟ್ 8 ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ

ಮಂಗಳೂರು ಅಗಸ್ಟ್ 5 : ಆರ್‌ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯ ಕುರಿತು ಜಿಲ್ಲಾ ಉಸ್ತುವಾರಿ ಬಿ. ರಮಾನಾಥ ರೈ ಆಸಕ್ತಿ ವಹಿಸದೇ ಪರೋಕ್ಷವಾಗಿ ಆರೋಪಿಗಳ ರಕ್ಷಣೆಗೆ ಸಹಕರಿಸುತ್ತಿದ್ದಾರೆ ಎಂದು ಹಿಂದೂ ಹಿತರಕ್ಷಣಾ ಸಮಿತಿಯ ಕೆ. ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ 4 ರಂದು ಬಂಟ್ವಾಳದ ಬಿ.ಸಿ ರೋಡ್ ನಲ್ಲಿ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ನಡೆದು ಒಂದು ತಿಂಗಳಾಯಿತು. ಆದರೆ ಪ್ರಕರಣದ ತನಿಖೆಯಲ್ಲಿ ಪ್ರಗತಿ ಸಾಧಿಸದೇ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.

ಜಲೀಲ್ ಕರೋಪಾಡಿ, ಅಶ್ರಫ್ ಕೊಲೆ ಪ್ರಕರಣದ ಬಗ್ಗೆ ವಹಿಸಿದ್ದ ಆಸಕ್ತಿಯನ್ನು ಪೊಲೀಸ್ ಇಲಾಖೆ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ತೋರಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು. ಮೆಲ್ಕಾರ್ ಪವನ್ ರಾಜ್ ಹಾಗೂ ಕುತ್ತಾರಿನ ಚಿರಂಜೀವಿ ಅವರ ಕೊಲೆ ಯತ್ನ ಪ್ರಕರಣದಲ್ಲಿಯು ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸದೇ ನಿಷ್ಕ್ರೀಯರಾಗಿದ್ದಾರೆ ಎಂದು ಅವರು ದೂರಿದರು.

ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆ ಏಕ ಪ್ರಕಾರದ ನಿಲುವನ್ನು ತೆಗೆದುಕೊಳ್ಳದೇ ಒಂದು ವರ್ಗವನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಓಟಿನ ರಾಜಕಾರಣ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಅಗಸ್ಟ್ 8 ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಅವರು ತಿಳಿಸಿದರು.

Advertisement
Click to comment

You must be logged in to post a comment Login

Leave a Reply