Connect with us

DAKSHINA KANNADA

78 ಲಕ್ಷ ರೂ. ವೆಚ್ಚದಲ್ಲಿ ಸುರತ್ಕಲ್ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್ : ಡಾ.ಭರತ್ ಶೆಟ್ಟಿ

ಸುರತ್ಕಲ್ : ಸುರತ್ಕಲ್ ರೈಲ್ವೆ ಮೇಲ್ಸೇತುವೆಯನ್ನು 78 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲು ಟೆಂಡರ್ ನೀಡಲಾಗಿದ್ದು ,ಗಣೇಶ ಚತುರ್ಥಿಯ ಬಳಿಕ ಕಾಮಗಾರಿ ನಡೆಸಲು ಉದ್ದೇಶಿಸಿದ್ದು,ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ಶಾಸಕ ಡಾ ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರೈಲ್ವೆ ಮೇಲ್ ಸೇತುವೆ ಸಂಪೂರ್ಣವಾಗಿ ಹದಗೆಟ್ಟಿದ್ದು ಕಾಂಕ್ರೀಟ್ ಕಾಮಗಾರಿಯಿಂದ ಶಾಶ್ವತ ಪರಿಹಾರ ದೊರಕಲಿದೆ.ಮಳೆ ನೀರು ಹರಿದು ಹೋಗಲು ಕನ್ವರ್ಟ್ ವ್ಯವಸ್ಥೆಯನ್ನ ಮಾಡಲಾಗುತ್ತದೆ. ಸುರತ್ಕಲ್ ನಿಂದ ಚೊಕ್ಕಬೆಟ್ಟು ತಿರುಗು ಜಂಕ್ಷನ್ ಸಹಿತ ಇದೇ ಸಂದರ್ಭ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾಮಗಾರಿಗೆ ರೈಲ್ವೆ ಮೇಲ್ ಸೇತುವೆಯನ್ನು ಎರಡು ತಿಂಗಳ ಕಾಲ ಕಾಮಗಾರಿ ವೇಳೆ ಸಂಪೂರ್ಣ ಮುಚ್ಚಬೇಕಾಗುತ್ತದೆ .ಪರ್ಯಾಯ ರಸ್ತೆಯ ಬಗ್ಗೆ ಪೊಲೀಸ್ ಇಲಾಖೆ ಶೀಘ್ರದಲ್ಲೇ ನೋಟಿಫಿಕೇಶನ್ ಹೊರಡಿಸಲು ಕ್ರಮ ಕೈಗೊಳ್ಳುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.ಎಂಆರ್‌ಪಿಯಲ್ ಕೃಷ್ಣಾಪುರ ಕಡೆ ಹೋಗುವ ಎಲ್ಲಾ ಬಸ್ಸು, ಘನ ವಾಹನಗಳು ಕುಳಾಯಿ ವಿದ್ಯಾನಗರ ಕಾನ ಬಾಳವಾಗಿ ಸಂಚರಿಸಬೇಕಾಗುತ್ತದೆ.ಕೃಷ್ಣಾಪುರ ಕಾಟಿಪಳ್ಳ ಸೂರಿಂಜೆ ಗೆ ಕಡೆ ಹೋಗುವ ದ್ವಿಚಕ್ರ, ಕಾರು ಇತರೆ ಸಣ್ಣ ವಾಹನಗಳು ಹೋಟೆಲ್ ಸೂರಜ್ ಇಂಟರ್ನ್ಯಾಷನಲ್ ಕಡೆಯಿಂದ ಒಳ ರಸ್ತೆಯಾಗಿ ಚೊಕಬೆಟ್ಟು ಜಂಕ್ಷನ್ ತಲುಪಿ ಹೋಗಬೇಕಾಗುತ್ತದೆ.ಈ ಕುರಿತು ಪೊಲೀಸರು ಅಧಿಕೃತ ಆದೇಶವನ್ನು ಒಂದೆರಡು ವಾರದೊಳಗಾಗಿ
ಅಧಿಕೃತ ತೀರ್ಮಾನ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.ರೈಲ್ವೆ ಮೇಲ್ ಸೇತುವೆಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲು ಕೊಂಕಣ ರೈಲ್ವೆ. ಈಗಾಗಲೇ ತನ್ನ ಅನುಮತಿಯನ್ನು ನೀಡಿದೆ.ಸೇತುವೆಗೆ ತಕ್ಕಂತೆ ಕಾಂಕ್ರೀಟ್ ತಾಂತ್ರಿಕವಾಗಿ ಎಷ್ಟು ದಪ್ಪವಿರಬೇಕು ಎಂಬುದರ ಬಗ್ಗೆ ರೈಲ್ವೆ ಇಲಾಖೆ ಸಲಹೆ ಸೂಚನೆಗಳನ್ನು ನೀಡಿದೆ.
ಈಗಾಗಲೇ ಹಲವು ಬಾರಿ ರೈಲ್ವೆ ಮೇಲ್ ಸೇತುವೆಗೆ ತೇಪೆ ಕಾರ್ಯ ನಡೆಸಲಾಗಿದ್ದರೂ,ಭಾರಿ ಮಳೆಗೆ ನೀರು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ಪದೇ ಪದೇ ಕೆಟ್ಟು ಹೋಗುತ್ತಿತ್ತು. ಶಾಶ್ವತ ಕಾಮಗಾರಿಯ ಸಂದರ್ಭ ಮಳೆ ನೀರು ಅರಿದು ಹೋಗಲು ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ.ಸುರತ್ಕಲ್ ಕಾಮಗಾರಿಗೂ ಮುನ್ನ ವಿದ್ಯಾನಗರದ ರೈಲ್ವೆ ಮೇಲ್ ಸೇತುವೆಗೆ ಡಾಮರೀಕರಣ ನಡೆಸುವಂತೆ ಇದೇ ಸಂದರ್ಭ ಸಲಹೆ ನೀಡಲಾಗಿದೆ.ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಸಹಿತ ಬೇಕಾದ ಕ್ರಮವನ್ನ ಸಂಚಾರಿ ಪೊಲೀಸ್ ಇಲಾಖೆ ತೆಗೆದುಕೊಳ್ಳಲಿದೆ. ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ
ಸರಿತಾ ಶಶಿಧರ್, ವರುಣ್ ಚೌಟ, ಲಕ್ಷ್ಮೀಶೇಖರ್ ದೇವಾಡಿಗ, ಲೋಕೇಶ್ ಬೊಳ್ಳಾಜೆ, ಸಂಶಾದ್ ,ಮಂಗಳೂರು ಕಮಿಷನರೇಟ್ ವಿಭಾಗದ ಟ್ರಾಫಿಕ್ ವಿಭಾಗದ ಡೆಸಿಪಿ ನಜ್ಮಾ ಫಾರೂಕಿ ,ನಿರೀಕ್ಷಕ ಶರೀಫ್, ಸುರತ್ಕಲ್ ಪೊಲೀಸ್ ಠಾಣೆಯ ರಘು ನಾಯಕ್ ಮಂಗಳೂರು ಮಹಾನಗರ ಪಾಲಿಕೆಯ ಎ ಡಬ್ಲ್ಯೂ ಇ ಕಾರ್ತಿಕ್ ,ವಿನೋದ್ ಉಪಸ್ಥಿತರಿದ್ದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *