LATEST NEWS
ರೌಡಿ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಐವರು ಆರೋಪಿಗಳು ಖುಲಾಸೆ

ಉಡುಪಿ ಸೆಪ್ಟೆಂಬರ್ 06:ರೌಡಿ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ ಇಂದು ಆದೇಶ ನೀಡಿದೆ.
ಸಂತೆಕಟ್ಟೆ ಪ್ರಗತಿನಗರದ ಐವನ್ ರಿಚರ್ಡ್ ಯಾನೆ ಮುನ್ನ(41), ಅಲೆವೂರು ಗುಡ್ಡೆಯಂಗಡಿಯ ಗುರುಪ್ರಸಾದ್ ಶೆಟ್ಟಿ(34), ಬೈಲೂರು ಹನುಮಾನ್ ಗ್ಯಾರೇಜ್ ಬಳಿಯ ಸಂತೋಷ ಪೂಜಾರಿ(40), ಕೊರಂಗ್ರಪಾಡಿಯ ವಿಶ್ವನಾಥ ಶೆಟ್ಟಿ(40), ಕುಕ್ಕಿಕಟ್ಟೆ ಕಲ್ಯಾಣ ನಗರದ ಜಾಕೀರ್ ಹುಸೈನ್(33) ಖುಲಾಸೆಗೊಂಡ ಆರೋಪಿಗಳು.

2011ರಲ್ಲಿ ಹಿರಿಯಡ್ಕ ಜೈಲಿನಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರತೀಕಾರವಾಗಿ ಆತನ ಸಹಚರರು 2014ರಲ್ಲಿ ಪಿಟ್ಟಿ ನಾಗೇಶನನ್ನು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶ ಶಾಂತವೀರ ಶಿವಪ್ಪ, ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದರು. ಐವರು ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ ವಾದಿಸಿದ್ದರು.