Connect with us

    LATEST NEWS

    ಲಾಂಗು ಮಚ್ಚುಗಳಿಂದ ಮನೆ ಮೇಲೆ ದಾಳಿ : ನಾಲ್ವರಿಗೆ ಗಾಯ

    ಮಂಗಳೂರು,ಸೆಪ್ಟೆಂಬರ್ 03 : ತಡ ರಾತ್ರಿ ಲಾಂಗು ಮಚ್ಚುಗಳಿಂದ ದುಷ್ಕರ್ಮಿಗಳ ತಂಡ ಒಂದು ಮನೆಮೇಲೆ ದಾಳಿ ನಡೆಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ದಾಳಿಯಲ್ಲಿ ಮನೆಯ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ. ಉಳ್ಳಾಲ ದರ್ಗಾ ಬಳಿಯ ಖಾಸಿಮ್ ಎಂಬವರ ಮನೆಗೆ ರೌಡಿಗಳನ್ನೊಳಗೊಂಡ 15 ಜನರ ತಂಡದಿಂದ ಈ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಮನೆ ಮಾಲೀಕ ಖಾಸಿಮ್, ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ  ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಖಾಸಿಮ್ ನ ಮತ್ತೂರ್ವ ಮಗ ಹಂಝ್ ನನ್ನು ಕೊಲೆ ಮಾಡಲು ಬಂದಿದ್ದಾಗಿ  ದಾಳಿ ವೇಳೆ  ಹಲ್ಲೆಕೋರರು ಹೇಳಿದ್ದಾಗಿ ಮನೆಮಂದಿ ಹೇಳಿಕೆ ನೀಡಿದ್ದಾರೆ. ಹಂಝಾ ಎಲ್ಲಿ ಹೇಳು ಎನ್ನುತ್ತಲೇ ತಂಡ ಹಲ್ಲೆ ನಡೆಸಿ ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದಿದೆ. ದಾಳಿ ವೇಳೆ ಹಂಝ ಮನೆಯಲ್ಲಿ ಇಲ್ಲದ ಕಾರಣ ಬಚಾವ್ ಆಗಿದ್ದು ಆವೇಶದಲ್ಲಿದ್ದ ದಾಳಿಕೋರಾರು ಮನೆ ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.  ಎಂದು ಹೇಳಲಾಗಿದೆಘಟನೆಯಲ್ಲಿ ಗಾಯಾಗೊಂಡವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ಪೋಲಿಸ್ಪೊ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply