LATEST NEWS
# BoycottMaldievs ಪ್ರಧಾನಿ ಮೋದಿ ಲಕ್ಷದ್ವೀಪದ ಭೇಟಿಯನ್ನು ಅಪಹಾಸ್ಯ ಮಾಡಿದ ಮಾಲ್ಡೀವ್ಸ್ ಸರಕಾರಕ್ಕೆ ತಿರುಗೇಟು ಕೊಟ್ಟ ಭಾರತೀಯರು
ಮಾಲ್ಡೀವ್ಸ್ ಜನವರಿ 07 : ದೇಶದ ಪ್ರಧಾನಿಯಾಗಿ ಲಕ್ಷದ್ವೀಪಕ್ಕೆ ತೆರಳಿಲ ಅಲ್ಲಿನ ಪ್ರವಾಸೋಧ್ಯಮದ ಬಗ್ಗೆ ಮಾತನಾಡಿದ್ದಕ್ಕೆ ಮಾಲ್ಡೀವ್ಸ್ ಸರಕಾರದ ಸಚಿವರು ಟೀಕಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ #Boycott Maldievs ಟ್ರೆಂಡ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಸೌಂದರ್ಯದ ಬಗ್ಗೆ ವರ್ಣನೆ ಮಾಡಿ ಲಕ್ಷದ್ವೀಪಕ್ಕೆ ಪ್ರವಾಸೋದ್ಯಮಕ್ಕೆ ಬನ್ನಿ ಎಂದು ಕರೆ ನೀಡಿದ್ದರೂ, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮಾಲ್ಡೀವ್ಸ್ ಹಾಗೂ ಲಕ್ಷದ್ಪೀಪ ಬಗ್ಗೆ ಹೋಲಿಕೆಯ ಪೋಸ್ಟ್ ಗಳು ವೈರಲ್ ಆಗಿದ್ದವು. ಆದರೆ ಈ ಸಾಮಾಜಿಕ ಜಾಲತಾಣ ಗಲಾಟೆಗೆ ಮಾಲ್ಡೀವ್ಸ್ ನ ಮೂವರು ಸಚಿವರು ಎಂಟ್ರಿ ಆಗಿದ್ದು, ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು.
ಭಾರತವು ಮಾಲ್ಡೀವ್ಸ್ ನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿರುವ ಅಲ್ಲಿನ ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ ಜತೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಯಾವಾಗ ಮಾಲ್ಡೀವ್ಸ್ ಸಚಿವರು ದೇಶ ಹಾಗೂ ಪ್ರಧಾನಿ ಮೋದಿ ವಿರುದ್ದ ತಿರುಗಿ ಬಿದ್ದರೋ ಅಲ್ಲಿಗೆ ಭಾರತೀಯರು ಮಾಲ್ಡೀವ್ಸ್ ವಿರುದ್ದ ಆಕ್ರೋಶ ಹೊರಹಾಕಿದರು.
ಈಗಾಗಲೇ ಭಾರತದ ಪ್ರಮುಖ ಸ್ಟಾರ್ ಗಳು ಮಾಲ್ಡೀವ್ಸ್ ಸಚಿವರ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಲಕ್ಷದ್ವೀಪದ ಪ್ರವಾಸೋದ್ಯಮದ ಪರ ಮಾತನಾಡಿದ್ದಾರೆ. ಇನ್ನು ಮಾಲ್ಡೀವ್ಸ್ ನ ಸಚಿವರ ಈ ಹೇಳಿಕೆಯನ್ನು ಅಲ್ಲಿನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರೇ ಟೀಕಿಸಿದ್ದಾರೆ. ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಇಂತಹ ಹೇಳಿಕೆಗಲಿಂದ ಸರ್ಕಾರವನ್ನು ದೂರವಿಡುವಂತೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಒತ್ತಾಯಿಸಿದರು.