DAKSHINA KANNADA
ನಿವೃತ್ತ ಸೈನಿಕನ ಮನೆಯಲ್ಲಿ ದರೋಡೆ : ಲಕ್ಷಾಂತರ ಮೌಲ್ಯದ ನಗ-ನಗದು ಲೂಟಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ನಿವೃತ್ತ ಸೈನಿಕನ ಮನೆಯಲ್ಲಿ ದರೋಡೆ : ಲಕ್ಷಾಂತರ ಮೌಲ್ಯದ ನಗ-ನಗದು ಲೂಟಿ
ಪುತ್ತೂರು, ಮಾರ್ಚ್ 22 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ದರೋಡೆ ನಡೆದಿದೆ.
ಪುತ್ತೂರು ತಾಲೂಕಿನ ಇಚ್ಲಂಪಾಡಿಯ ಮಾನಡ್ಕ ಎಂಬಲ್ಲಿ ಇಂದು ಮುಂಜಾನೆ ಈ ದರೋಡೆ ಕೃತ್ಯ ನಡೆದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಇಲ್ಲಿನ ವೃದ್ದ ದಂಪತಿಗಳಿದ್ದ ಮನೆಯಲ್ಲಿ ಪಿಸ್ತೂಲ್ ಹಾಗೂ ತಲವಾರುಗಳನ್ನು ಝಳಪಿಸಿ ದರೋಡೆಕೋರಾರು ಲಕ್ಷಾಂತರ ಮೌಲ್ಯದ ನಗ-ನಗದುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಈ ಮನೆ ನಿವೃತ್ತ ಸೈನಿಕ ನಾರಾಯಣ ಪಿಳ್ಳೆ ಎಂಬವರಿಗೆ ಸೇರಿದ್ದಾಗಿದ್ದು ಇಬ್ಬರು ದರೋಡೆಕೋರ ತಂಡ ಇದನ್ನು ನಡೆಸಿದ್ದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು, ಉಪ್ಪಿನಂಗಡಿ ಪೋಲೀಸರು, ಬೆರಳಚ್ಚು ತಂಡ ಹಾಗೂ ಶ್ವಾನದಳ ಧಾವಿಸಿದ್ದು. ಪರಿಶೀಲನೆ ನಡೆಸಲಾಗುತ್ತಿದೆ.