UDUPI
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಣ ದೋಚಿದ ದರೋಡೆಕೊರರು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಣ ದೋಚಿದ ದರೋಡೆಕೊರರು
ಉಡುಪಿ ಸೆಪ್ಟೆಂಬರ್ 20: ಯುವತಿಗೆ ದೊಣ್ಣೆಯಿಂದ ಹೊಡೆದು ದರೋಡೆ ಮಾಡಿದ ಘಟನೆ ಕುಂದಾಪುರದ ರಟ್ಟಾಡಿ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿಬ್ಬಂದಿ ಪ್ರೀತಿ(24) ಎಂಬವರ ಮೇಲೆ ದರೋಡೆಕೊರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿಬ್ಬಂದಿಯಾಗಿದ್ದ ಪ್ರೀತಿ, ರಟ್ಟಾಡಿ ಗ್ರಾಮದ ಎರಡು ಒಕ್ಕೂಟದಿಂದ ಹಣ ಸಂಗ್ರಹಿಸಿದ್ದರು.
ಪ್ರೀತಿ ಅವರು ಕಚೇರಿಯಲಲ್ಲಿದ್ದ ಸಂದರ್ಭ ನೋಡಿ ಕಚೇರಿಗೆ ನುಗ್ಗಿದ ದರೋಡೆಕೊರರು ಪ್ರೀತಿ ಅವರ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿ ಹಣವನ್ನು ದೋಚಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ದರೊಡೆಯಾಗಿದೆ ಎಂದು ಹೇಳಲಾಗಿದೆ. ದರೋಡೆ ಸಂದರ್ಭದಲ್ಲಿ ದರೋಡೆಕೊರರು ಹೆಲ್ಮೆಟ್ ಧರಿಸಿದ್ದರು ಎಂದು ಹೇಳಲಾಗಿದೆ.
ಪ್ರೀತಿ ಅವರಿಗೆ ತಲೆಗೆ ಗಂಭೀರಗಾಯಗಳಾಗಿದ್ದು ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮವಾಸೆಬೈಲು ಪೊಲೀಸರು ಪ್ರಕರಣ ದಾಖಲಿಸಿ ದರೊಡೆಕೊರರ ಬಂಧನಕ್ಕೆ ಬಲೆ ಬಿಸಿದ್ದಾರೆ.
ಈ ನಡುವೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ದರೋಡೆಕೊರರ ಬಂಧನಕ್ಕೆ ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಅಮಾವಾಸೆಬೈಲು ಠಾಣಾ ವ್ಯಾಪ್ತಿಯ ರಟ್ಟಾಡಿ ಬಸ್ ನಿಲ್ದಾಣದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಸದಸ್ಯೆಯ ಬ್ಯಾಗಿನಿಂದ ಹಣವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಅನುಮಾನಾಸ್ಪದ ವ್ಯಕ್ತಿಗಳು ಇಲ್ಲೇ ಸುತ್ತ ಮುತ್ತ ಕಾಡಿನಲ್ಲಿ ಅಡಗಿರುವ ಬಗ್ಗೆ ಮತ್ತು ಬೈಕ್ ಹಾಗು ಕಾರಿನಲ್ಲಿ ತಿರುಗುತ್ತಿರುವ ಬಗ್ಗೆ ಮಾಹಿತಿ ಇದ್ದು ಕಂಡುಬಂದಲ್ಲಿ ಕೂಡಲೇ ಗಮನಿಸಿ ಪೋಲಿಸ್ ಗೆ ಮಾಹಿತಿ ನೀಡುವುದು
– ಉಡುಪಿ ಜಿಲ್ಲಾ ಪೊಲೀಸ್