DAKSHINA KANNADA
ಕಾಂತಾರಾ ಭಾಗ-2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ಬಳಿ ಅನುಮತಿ ಕೇಳಿದ ರಿಷಬ್

ಮಂಗಳೂರು, ಡಿಸೆಂಬರ್ 10: ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರ 2 ಗೆ ಚಿತ್ರತಂಡ ಅನುಮತಿ ಕೇಳಿದೆ.
ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ಕೋಲ ನೀಡಿದ ಕಾಂತಾರಾ ಚಿತ್ರ ತಂಡ, ಹರಕೆ ಕೋಲದಲ್ಲಿ ಕಾಂತಾರಾ-2 ಚಿತ್ರಕ್ಕೆ ಚಿತ್ರತಂಡ ಅನುಮತಿ ಕೇಳಿದೆ. ಈ ವೇಳೆ ಅಣ್ಣಪ್ಪ ಪಂಜುರ್ಲಿ ಕಾಂತಾರ ಭಾಗ-2 ಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದು, ಚಿತ್ರತಂಡಕ್ಕೆ ಹಲವು ನಿಯಮಗಳನ್ನು ದೈವ ಅಣ್ಣಪ್ಪ ಪಂಜುರ್ಲಿ ಹೇಳಿದೆ.

ಮೊದಲು ಚಿತ್ರಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ನೂರು ಬಾರಿ ಯೋಚನೆ ಮಾಡಿ, ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ, ಶುದ್ಧಾಚಾರದೊಂದಿಗೆ ಚಿತ್ರವನ್ನು ಮುಂದುವರಿಸಿರಿ ಮಾಡಿದ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡುತ್ತೇನೆ ಎಂದು ಕಾಂತಾರ ಚಿತ್ರತಂಡಕ್ಕೆ ದೈವ ಅಣ್ಣಪ್ಪ ಪಂಜುರ್ಲಿ ಅಭಯ ನೀಡಿದೆ.
ಅಣ್ಣಪ್ಪ ಪಂಜುರ್ಲಿ ಕೋಲದ ಸಂಧರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ,ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಕಾಂತಾರಾ ಕಲಾವಿದರು, ರಿಷಬ್ ಕುಟುಂಬಸ್ಥರು ಭಾಗಿಯಾಗಿದ್ದರು.