FILM
ರಾಷ್ಟ್ರ ಪ್ರಶಸ್ತಿ ಬೆನ್ನಲ್ಲೇ ಬಾಲಿವುಡ್ ಸಿನೆಮಾ ವಿರುದ್ದ ರಿಷಬ್ ಶೆಟ್ಟಿ ಆಕ್ರೋಶ
ಬೆಂಗಳೂರು ಅಗಸ್ಟ್ 21 : ಕಾಂತಾರ ಸಿನೆಮಾಗಾಗಿ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ರಿಷಬ್ ಶೆಟ್ಟಿ ಇದೀಗ ಬಾಲಿವುಡ್ ಸಿನೆಮಾಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸಿನೆಮಾಗಳು ಭಾರತೀಯ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ‘ಮೆಟ್ರೋ ಸಾಗ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಭಾರತೀಯ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದೇ ಸಿನಿಮಾ ಮಾಡೋ ಆರ್ಟ್ಸ್ ಎಂದುಕೊಂಡು ಹೊರದೇಶಗಳಿಗೆ ಹೋಗಿ ಅವಾರ್ಡ್ಗಳನ್ನು ಗೆದ್ದು ಬಂದಿದ್ದನ್ನು ನೋಡಿದ್ದೇನೆ. ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ನಮ್ಮಲ್ಲಿರೋದನ್ನು ಪಾಸಿಟಿವ್ ನೋಟ್ನಲ್ಲಿ ತೋರಿಸಬಹುದಲ್ಲ’ ಎಂದಿದ್ದಾರೆ ಅವರು.
ರಿಷಬ್ ಶೆಟ್ಟಿ ಹೇಳಿಕೆ ವೈರಲ್ ಆಗಿದೆ. ಅನೇಕರು ರಿಷಬ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಸರಿಯಾದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
You must be logged in to post a comment Login