LATEST NEWS
ಮಂಗಳೂರು ನಗರದಲ್ಲಿ ಮೋಡಕವಿದ ವಾತಾವರಣ – ತುಂತುರು ಮಳೆ ಸಿಂಚನ
ಮಂಗಳೂರು ಮೇ 13: ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರಿನ ನಗರದ ಜನತೆಗೆ ಮಳೆರಾಯ ಸ್ವಲ್ಪಮಟ್ಟಿನ ರಿಲಾಕ್ಸ್ ನೀಡಿದ್ದಾನೆ. ಕಳೆದ ಎರಡು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಾತ್ರ ಸುರಿಯುತ್ತಿದ್ದ ಮಳೆ ಇಂದು ಮುಂಜಾನೆ ಮಂಗಳೂರು ನಗರದಲ್ಲೂ ಸುರಿದಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಮಳೆ ಸಾಧ್ಯತೆ ಇದೆ ಎಂದು ಹೇಳಿತ್ತು, ಅದರಂತೆ ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿ ಭಾರೀ ಮಳೆಯಾಗಿತ್ತು, ಆದರೆ ಮಂಗಳೂರು ನಗರ ಪ್ರದೇಶಗಳಲ್ಲಿ ಮಳೆಯಾಗದೇ ಬಿಸಿಲು ಜೋರಾಗಿತ್ತು, ಇಂದು ಮುಂಜಾನೆ ಮಂಗಳೂರು ನಗರ ಪ್ರದೇಶದಲ್ಲೂ ಮಳೆಯಾಗಿದ್ದು , ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಬಿಸಿಲಿನ ಬೇಗೆ ಕಮ್ಮಿಯಾಗಿದೆ.
ಇನ್ನು ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದ ಹಲವಡೆ ಮಳೆಯಾಗಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಹಾನಿಯುಂಟಾಗಿದೆ. ಜಿಲ್ಲೆಯಲ್ಲಿ ಶನಿವಾರ ಮತ್ತು ರವಿವಾರ ಸಂಜೆ ಗಾಳಿ ಮಳೆಗೆ ಅಲ್ಲಲ್ಲಿ ಮರ ಬಿದ್ದು ಕೆಲವು ಮನೆಗಳು ಹಾನಿಯಾಗಿದೆ. ಜಿಲ್ಲೆಯಲ್ಲಿ 7 ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಸುಳ್ಯದಲ್ಲಿ 4, ಕಡಬದಲ್ಲಿ 1 ಮತ್ತು ಬಂಟ್ವಾಳದಲ್ಲಿ 2 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲಲ್ಲಿ ವಿದ್ಯತ್ ಸಂಪರ್ಕ ಕಡಿದು ಹೋಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಪುತ್ತೂರಿನ ಉರ್ಲಾಂಡಿ, ಸಿಂಗಾಣಿಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿಯಾಗಿದೆ.