LATEST NEWS
ಭಾರತದಿಂದ ಗಡಿಪಾರಾದ ಬೆನ್ನಲ್ಲೇ ಕ್ಷಮಿಸಿ ಎಂದ ಪಾಕ್ ನಿರೂಪಕಿ

ನವದೆಹಲಿ ಅಕ್ಟೋಬರ್ 13: ಭಾರತ ಮತ್ತು ಹಿಂದೂ ವಿರೋಧಿ ಟ್ವೀಟ್ ಮಾಡಿ ಆಕ್ರೋಶಕ್ಕೆ ಒಳಗಾಗಿದ್ದ ಪಾಕಿಸ್ತಾನದ ನಿರೂಪಕಿ ಇದೀಗ ಕ್ಷಮೆ ಕೇಳಿದ್ದಾರೆ.
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ವರದಿಗಾರಿಕೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಡಿಜಿಟಲ್ ತಂಡದ ಜತೆ ಹೈದರಾಬಾದ್‌ಗೆ ಬಂದಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಝೈನಬ್ ಅಬ್ಬಾಸ್ ಅವರು ಇತ್ತೀಚೆಗೆ ದೇಶ ಬಿಟ್ಟು ತೆರಳಿದ್ದರು. ಈ ಘಟನೆ ಕುರಿತು ಇದೀಗ ಅವರು ಮೌನ ಮುರಿದಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನಾನು ಇಷ್ಟಪಡುವ ಕ್ರೀಡೆಗಾಗಿ ಇತರೆ ದೇಶಗಳಿಗೆ ಪ್ರಯಾಣಿಸಲು ಮತ್ತು ಪ್ರಸ್ತುತಪಡಿಸುವ ಅವಕಾಶಗಳಿಗಾಗಿ ನಾನು ಅತ್ಯಂತ ಅದೃಷ್ಟಶಾಲಿಯಾಗಿದ್ದು, ಕೃತಜ್ಞತೆಯನ್ನು ಹೊಂದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ನನ್ನನ್ನು ಭಾರತದಿಂದ ಗಡೀಪಾರು ಮಾಡಿಲ್ಲ. ಅಲ್ಲಿಂದ (ಭಾರತದಿಂದ) ಹೊರಹೋಗುವಂತೆ ಯಾರೂ ಕೂಡ ಹೇಳಿಲ್ಲ ಎಂದು ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ. ಈ ಚರ್ಚೆಗಳು ಹುಟ್ಟಿಕೊಂಡ ನಾಲ್ಕು ದಿನಗಳ ಬಳಿಕ ಪಾಕ್ ನಿರೂಪಕಿ ಕ್ಷಮೆಯಾಚಿಸಿದ್ದಾಳೆ. ನನ್ನ ಅನಿರೀಕ್ಷಿತ ಹೇಳಿಕೆಗಳಿಂದ ನೋವುಂಟಾಗಿದ್ದರೆ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂಬುದಾಗಿ ಆಕೆ ತನ್ನ ಟ್ವಿಟ್ಟರ್ (X) ಖಾತೆಯಲ್ಲಿ ಬರೆದುಕೊಂಡಿದ್ದಾಳೆ.