LATEST NEWS
ಫೆಬ್ರವರಿ 14ನ್ನು ಪುಲ್ವಾಮಾ ಹುತಾತ್ಮರ ದಿನವಾಗಿ ಆಚರಿಸಿಲು ಬಜರಂಗದಳ ಕರೆ

ಫೆಬ್ರವರಿ 14ನ್ನು ಪುಲ್ವಾಮಾ ಹುತಾತ್ಮರ ದಿನವಾಗಿ ಆಚರಿಸಿಲು ಬಜರಂಗದಳ ಕರೆ
ಮಂಗಳೂರು ಫೆಬ್ರವರಿ 11: ಕಳೆದ ವರ್ಷ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದ ಸಿಆರ್ ಪಿಎಫ್ ಯೋಧರ ನೆನಪಿಗಾಗಿ ಫೆಬ್ರವರಿ 14 ನ್ನು ಪುಲ್ವಾಮಾ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಬಜರಂಗದಳ ಕರೆ ನೀಡಿದೆ.
ಈ ಬಗ್ಗೆ ಮಂಗಳೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, 2019ರ ಫೆಬ್ರವರಿ 14 ದೇಶವೇ ಮರೆಯಲಾಗದ ದಿನವಾಗಿದ್ದು, ಈ ದಿನ ನಾವು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರನ್ನು ಸ್ಮರಿಸುವಂತಹ ದಿನ. ಅದಕ್ಕಾಗಿ ಫೆ. 14ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ‘ಪುಲ್ವಾಮಾ ಹುತಾತ್ಮ ದಿವಸ್’ ನ್ನು ಆಚರಿಸಲು ಭಜರಂಗದಳ ಕಾರ್ಯಕರ್ತರು ಮುಂದಾಗಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ರಾಷ್ಟ್ರ ಪ್ರೇಮಿಗಳು ಭಾಗವಹಿಸಿ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸಬೇಕು ಎಂದರು. ಮಾತ್ರವಲ್ಲದೆ ಪ್ರತೀ ವರ್ಷ ಫೆ.14ರಂದು ಪುಲ್ವಾಮಾ ಹುತಾತ್ಮ ದಿನ ಆಚರಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಗೃಹ ಸಚಿವರ ಮೂಲಕ ಮನವಿ ಮಾಡಲಿದ್ದೇವೆ ಎಂದು ಹೇಳಿದರು.
