KARNATAKA
ತುಳುವರಲ್ಲಿ DySP ರೀನಾ ಸುವರ್ಣ ಮನವಿ…!!
ಬೆಂಗಳೂರು : ಕೊರೊನಾ ಈಗಾಗಲೇ ರಾಜ್ಯದಲ್ಲಿ ತನ್ನ ರೌದ್ರ ನರ್ತನ ಆರಂಭಿಸಿದೆ. ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಸೊಂಕಿತ ಪ್ರದೇಶವಾಗಿ ಬೆಂಗಳೂರು ಮುಂಚೂಣಿಯಲ್ಲಿದ್ದು, ದಿನದಿಂದ ದಿನಕ್ಕೆ ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗುತ್ತಿದೆ.
ಸರಕಾರ ಈಗಾಗಲೇ ಮಾಸ್ಕ್ ಸಾಮಾಜಿಕ ಅಂತರದ ಬಗ್ಗೆ ಕಾನೂನುಗಳನ್ನು ರೂಪಿಸಿದ್ದು, ಅದರ ಕಾರ್ಯಗತಗೊಳಿಸುವ ಕೆಲಸವನ್ನು ಪೊಲೀಸ್ ಇಲಾಖೆ ಹೆಗಲ ಮೇಲೆ ಬಿದ್ದಿದೆ. ಈ ಹಿನ್ನಲೆ ಪೊಲೀಸ್ ಇಲಾಖೆ ವಿಭಿನ್ನವಾಗಿ ಈ ಜನರಿಗೆ ತಿಳಿ ಹೇಳಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರ ಮನೆ ಭಾಷೆಯಲ್ಲಿ ಸಂದೇಶಗಳನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಉತ್ತರದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮಾತೃಭಾಷೆಯಲ್ಲಿ ತನ್ನ ಹುಟ್ಟೂರಿನ ಜನರಿಗೆ ಕೊರೋನಾ ಎಚ್ಚರಿಕೆಯ ಸಂದೇಶ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಬೆಂಗಳೂರು ಉತ್ತರದ ಎಸಿಪಿಯಾಗಿರುವ ರೀನಾ ಸುವರ್ಣ, ಕೊರೋನಾ ತಡೆಗಟ್ಟುವ ಸಂದೇಶವನ್ನು ತಮ್ಮ ಮಾತೃಭಾಷೆ ತುಳುವಿನಲ್ಲಿ ರವಾನಿಸಿದ್ದಾರೆ. ರೀನಾ ರಘು ಸುವರ್ಣ ಎನ್ ಮೂಲತಃ ಮಂಗಳೂರಿನ ಬೋಳಾರದವರಾಗಿದ್ದು, ನಮಿತ್ ಸುವರ್ಣ ಹಾಗೂ ಪ್ರೇಮ ಸುವರ್ಣ ದಂಪತಿಗಳ ಪುತ್ರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ನಗರದ ಹಲವೆಡೆ ಕರ್ತವ್ಯ ನಿರ್ವಹಿಸಿ ದಕ್ಷ ಅಧಿಕಾರಿ ಎನಿಸಿಕೊಂಡಿದ್ದಾರೆ.
ವೀಡಿಯೋ ಮುಖಾಂತರ ಮಾತನಾಡಿರುವ ಅವರು, ಕೊರೋನಾ ,ಕೋವಿಡ್ ಪುದರ್ ಕೇನ್ನಗ ಪೋಡಿಗೆ ಆಪುನ ಸಹಜ. ನಮ್ಮ ಸುರಕ್ಷತೆಗಾದ್ ಸರ್ಕಾರ ಈ ತಿಂಗೊಲುದ 22 ಮುಟ ಲಾಕ್ ಡೌನ್ ಮಲ್ದೆರ್, ನಿಕ್ಲ್ನ ಸುರಕ್ಷತೆಗಾದ್ ,ಬೊಕ್ಕ ನಿಕ್ ಲ್ನ ಇಲ್ಲದಕ್ ಲ್ನ ಸುರಕ್ಷತೆಗಾದ್ ಮಾತೆರ್ಲ ಇಲ್ಲಡೇ ಇಪ್ಪುಲೇ, ಅವಶ್ಯಕತೆ ಇತ್ತ್ ಂಡ ಮಾತ್ರ ಇಲ್ಲಡ್ದ್ ಪಿದಯಿ ಪೋಲೆ.ನಮ್ಮ ಸೇಫ್ಟಿಗಾದ್ ಡಾಕ್ಟರ್, ನರ್ಸ್, ಪೋಲಿಸ್ ದಕ್ಲು ಜೀವದ ಆಸೆ ಬುಡ್ದು ಬೇಲೆ ಮಲ್ತೊಂದು ಉಲ್ಲೆರ್. ನಿಕ್ಲು ಮಾತೆರ್ಲ ಇಲ್ಲಡ್ ಇತ್ತದ್ ಲಾಕ್ ಡೌನ್ ಯಶಸ್ವಿ ಮಲ್ಪುಲೆ. ಜನಕ್ ಲ್ಡ ಪಾತೆರ್ನಗ ಸೋಶಿಯಲ್ ಡಿಸ್ಟೆನ್ಸ್ ಮೈಂಟೇನ್ ಮಲ್ಪುಲೇ ಅಂತ ಸ್ಟೇ ಹೋಮ್ ಸ್ಟೇ ಸೇಫ್ ಅಂದಿದ್ದಾರೆ.