Connect with us

KARNATAKA

ಯಾವುದೇ ಕಾರಣಕ್ಕೂ ಲಾಕ್ ಡೌನ್ ಮುಂದುವರಿಕೆ ಇಲ್ಲ ; ಯಡಿಯೂರಪ್ಪ ಖಡಕ್ ನುಡಿ

ಬೆಂಗಳೂರು, ಜುಲೈ 21 : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮುಂದುವರಿಕೆ ಮಾಡಲ್ಲ. ಬೆಂಗಳೂರು ಸೇರಿದಂತೆ ಯಾವುದೇ ಜಿಲ್ಲೆಯಲ್ಲೂ ಲಾಕ್ ಡೌನ್ ಇನ್ನು ಇರೋದಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ , ಯಾವುದೇ ಜಿಲ್ಲಾಡಳಿತ ಲಾಕ್ ಡೌನ್ ಮಾತು ಎತ್ತುವ ಹಾಗೇ ಇಲ್ಲ. ನಾಳೆಯಿಂದ ಜನರ ಚಟುವಟಿಕೆ ಯಥಾಸ್ಥಿತಿ ಇರಲಿದೆ. ಮಾಸ್ಕ್ ಧರಿಸಿಕೊಂಡು ಅಂತರ ಕಾಪಾಡಿ ಬದುಕುವುದನ್ನು ಕಲಿಯಬೇಕು ಎಂದು ಯಡಿಯೂರಪ್ಪ ಸಲಹೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸೋ‌ಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ ಆಗುವ ಬಗ್ಗೆ ಮಾತು ಕೇಳಿಬಂದಿತ್ತು. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಈ ಕಾರಣದಿಂದ ಇನ್ನು ಲಾಕ್ ಡೌನ್ ಮಾಡಲ್ಲ ಅಂತ ಖಡಾಖಂಡಿತವಾಗಿ ಸಿಎಂ ಹೇಳಿಕೆ ನೀಡಿದ್ದಾರೆ. ಮಾಸ್ಕ್ ಧರಿಸದೇ ಜನ ಹೊರಗೆ ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಲಹೆ ಮಾಡಿರುವ ಯಡಿಯೂರಪ್ಪ, ಹಾಗಂತ ಕಂಟೈನ್ಮೆಂಟ್ ಝೋನಲ್ಲಿ ಯಾವುದೇ ರಿಯಾಯಿತಿ ಕೊಡಬೇಡಿ. ಜನರ ಸಂಚಾರವನ್ನು ನಿಯಂತ್ರಿಸಿ ಕೊರೊನಾ ಹರಡದಂತೆ ತಡೆಯಿರಿ ಎಂದು ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಲಾಕ್ ಡೌನ್ ಮುಂದುವರಿಸಲು ಜಿಲ್ಲಾಡಳಿತ ಮನ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಾಳೆ ಸಿಎಂ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಇದೀಗ ಸಿಎಂ ಯಡಿಯೂರಪ್ಪ ಎಲ್ಲದಕ್ಕೂ ಒಂದೇ ಮಾತಿನಲ್ಲಿ ಉತ್ತರ ನೀಡಿದ್ದಾರೆ.

Facebook Comments

comments