KARNATAKA
ಚಿಕ್ಕಬಳ್ಳಾಪುರ – ರೆಡ್ ಮಿ ಕಂಪೆನಿಗೆ ಸೇರಿದ್ದ 3 ಕೋಟಿ ಮೌಲ್ಯದ ಮೊಬೈಲ್ ಕಳ್ಳತನ
ಚಿಕ್ಕಬಳ್ಳಾಪುರ ನವೆಂಬರ್ 30: ಬೆಂಗಳೂರಿಗೆ ನೊಯ್ಡಾದಿಂದ ಬರುತ್ತಿದ್ದ 3 ಕೋಟಿ ಮೌಲ್ಯದ ರೆಡ್ ಮಿ ಕಂಪೆನಿಯ ಮೊಬೈಲ್ ಗಳ ಕಳ್ಳತನವಾಗಿದೆ. ಈ ಸಂಬಂಧ ತಾಲ್ಲೂಕಿನ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಂಪನಿಯು ದೂರು ದಾಖಲಿಸಿದೆ.
ಸುಮಾರು 6,660 ರೆಡ್ ಮಿ ಕಂಪೆನಿಗೆ ಸೇರಿದ್ದ ಮೊಬೈಲ್ ಗಳು ಇದ್ದ ಕಂಟೈನರ್ ಲಾರಿ ರೆಡ್ಡಿಗೊಲ್ಲಾರಹಳ್ಳಿ ಗ್ರಾಮದ ಕ್ರಾಸ್ ಬಳಿ ಎನ್‌ಎಲ್ 01 ಎಎಫ್ 2743 ಎಂಬಲ್ಲಿ ಪತ್ತೆಯಾಗಿತ್ತು, ಲಾರಿ ಡ್ರೈವರ್ ರಾಹುಲ್ ಲಾರಿ ನಿಲ್ಲಿಸಿ ನಾಪತ್ತೆಯಾಗಿದ್ದ, ಕಂಪೆನಿ ಕಂಟೇನರ್ ನಿಗದಿತ ಸಮಯಕ್ಕೆ ಬೆಂಗಳೂರು ತಲುಪದ ಕಾರಣ ಕಂಟೇನರ್ ನಿಲುಗಡೆ ಆಗಿರುವುದು ಜಿಪಿಎಸ್ ಮೂಲಕ ಕಂಪನಿಯವರ ಗಮನಕ್ಕೆ ಬಂದಿದೆ. ತಕ್ಷಣ ಕಂಪನಿ ಸಿಬ್ಬಂದಿ ಪೆರೇಸಂದ್ರ ಠಾಣೆಗೆ ಮಾಹಿತಿ ನೀಡಿದ್ದರು. ‘ಕಂಟೇನರ್‌ನಲ್ಲಿದ್ದ ಶೇ 80ರಿಂದ 90ರಷ್ಟು ಮೊಬೈಲ್‌ಗಳ ಕಳ್ಳತನವಾಗಿದೆ. ಕಂಟೇನರ್ ಅನ್ನು ಕಂಪನಿಯವರ ಸುಪರ್ದಿಗೆ ನೀಡಲಾಗಿದೆ ಕಂಪನಿಯವರು ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.