Connect with us

    LATEST NEWS

    ಕರಾವಳಿಯಲ್ಲಿ ಗಣೇಶೋತ್ಸವದ ಸಡಗರ :ಉಡುಪಿಯಲ್ಲಿ ದಾಖಲೆಯ 436 ಗಣೇಶೋತ್ಸವಗಳು

    ಉಡುಪಿ, ಆಗಸ್ಟ್ 27 : ಪ್ರತಿ ವರ್ಷದಂತೆ ಈ ಬಾರಿಯೂ ಕರಾವಳಿಯಲ್ಲಿ ಗಣೇಶೋತ್ಸವದ ಸಡಗರ- ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನರನ್ನು ಒಗ್ಗೂಡಿಸಲು ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವ ಕರಾವಳಿನಾಡಿನಲ್ಲಿ ಹೆಚ್ಚುಕಡಿಮೆ ಐದು ದಶಕಗಳ ಬಳಿಕ ಆರಂಭವಾಯಿತು. ಮಂಗಳೂರು ಪ್ರತಾಪನಗರದ ಸಂಘ ನಿಕೇತನದಲ್ಲಿ ಆರಂಭಿಸಿದ ಗಣೇಶೋತ್ಸವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸಾರ್ವಜನಿಕ ಗಣೇಶೋತ್ಸವವಾಗಿದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವ ಸಂಪನ್ನಗೊಳ್ಳುತ್ತಿದೆ.ಹಿಂದೂ ಯುವ ಸೇನೆಯ ಅಶ್ರಯದಲ್ಲಿ ಕೇಂದ್ರ ಮೈದಾನಿನಲ್ಲಿ ಒಂಭತ್ತು ದಿನಗಳಕಾಲ ನಡೆಯುವ ಗಣೇಶೋತ್ಸವ ಅತ್ಯಂತ ವೈಭವ ಮತ್ತು ಅದ್ದೂರಿಯ ಉತ್ಸವವಾಗಿದೆ ಎಂದು ಹೇಳಬಹುದು.

    ಒಟ್ಟಾರೆಯಾಗಿ ಗಮನಿಸಿದರೆ ಈ ಹಿಂದಿನ ಉತ್ಸವಗಳಿಗೆ ಹೋಲಿಸಿದರೆ ಈ ಬಾರಿ ಉತ್ಸವದ ಗೌಜಿ ತುಸು ಕಡಿಮೆ ಎಂದೇ ಹೇಳಬಹುದು. ಇದಕ್ಕೆ ಹಣ ಹಾಗೂ ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯೂ ಹೌದು. ಅದರೆ ಈ ಬಾರಿ ಗಣೇಶೋತ್ಸವಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆ ಕಂಡಿದೆ. ಕರಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆರಾಜ್ಯ ಕೇರಳದ ಕಾಸರಗೋಡಿನಲ್ಲಿ ಗಣೇಶೋತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಈ ಮೂರು ಜಿಲ್ಲೆಗಳಿಗೆ ಹೋಲಿಸಿದರೆ ಕೇವಲ ಮೂರು ತಾಲೂಕಗಳನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಉತ್ಸವಗಳನ್ನು ಆಚರಿಸಲಾಗುತ್ತದೆ. ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಒಟ್ಟು 436 ಸಾರ್ವಜನಿಕ ಗಣೇಶೋತ್ಸವಗಳಿವೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯನ್ನೂ ಸೇರಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 372 ಗಣೇಶೋತ್ಸವಗಳಿವೆ.ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರು ಹೆಚ್ಚಾಗಿರುವುದರಿಂದ 21 ಗಣೇಶೋತ್ಸವಗಳು ಅಚರಿಸಲ್ಪಡುತ್ತಿವೆ. ಉಡುಪಿಯಲ್ಲಿ 2008ರಲ್ಲಿ 331 ಇದ್ದ ಗಣೇಶೋತ್ಸವಗಳು ಈ ಬಾರಿ 436ಕ್ಕೇರಿವೆ. ಕಳೆದ ವರ್ಷಕ್ಕಿಂತ ಈ ಬಾರಿ 16 ಉತ್ಸವಗಳು ಹೆಚ್ಚಾಗಿವೆ. ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಎಂಟು ಉತ್ಸವಗಳು ಜಾಸ್ತಿಯಾಗಿದೆ.ಗಣೇಶೋತ್ಸವಗಳು ಸಾಂಗವಾಗಿ ನಡೆಯಲು ಪೋಲಿಸ್ ಇಲಾಖೆ ಕೂಡ ವ್ಯಾಪಕ ಸಿದ್ದತೆಗಳನ್ನು ಮಾಡಿಕೊಂಡಿದೆ. ಅತಿ ಸೂಕ್ಷ್ಮಮತ್ತು ಸಾಮಾನ್ಯ ಎಂಬ ವಿಭಾಗಗಳನ್ನು ಮಾಡಿ ಬಂದೋಬಸ್ತ್ ಒದಗಿಸಲಾಗುತ್ತದೆ. ಸೂಕ್ಷ್ಮ,ಅತಿಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಕಾರ್ಯಕ್ರಮಗಳನ್ನು ಕ್ಲಪ್ತ ಸಮಯಕ್ಕೆ ಮುಗಿಸಲು ಸಮಯ ನಿಗದಿಗೊಳಿಸಲಾಗಿದೆ. ಗಣೇಶೋತ್ಸವದ ಮೆರವಣಿಗೆಗಳು ನಡೆಯುವ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *