LATEST NEWS
ಹೈಸ್ಕೂಲ್ ಹುಡುಗನ ಅಸಲಿ ಡ್ರೋನ್ ಕಹಾನಿ….!!

ಮಂಗಳೂರು: ಡ್ರೋನ್ ಪ್ರತಾಪ್ ನ ಸುಳ್ಳು ಕಥೆಗಳ ನಂತರ .. ಕರ್ನಾಟಕದಲ್ಲಿ ಈಗ ಅಸಲಿ ಡ್ರೋನ್ ತಯಾರಿಸಿರುವ ಅಸಲಿ ಯುವ ವಿಜ್ಞಾನಿಗಳ ಬೆಳಕಿಗೆ ಬರುತ್ತಿದ್ದಾರೆ. ಅಂತಹ ಒಬ್ಬ ಯುವ ವಿಜ್ಞಾನಿ ಕರಾವಳಿಯಲ್ಲೂ ಇದ್ದು, 10ನೇ ತರಗತಿ ಕಲಿಯುತ್ತಿರುವ ಬಾಲಕ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ, ಅಲ್ಲಿ ಸಿಕ್ಕ ದುಡ್ಡಿನಲ್ಲಿ ಪಿವಿಸಿ ಪೈಪ್ ಹಾಗೂ ಇತರ ವಸ್ತುಗಳ ಸಹಾಯದಿಂದ ಕೊನೆಗೂ ಸ್ವಂತ ಡ್ರೋನ್ ತಯಾರಿಸಿದ್ದಾನೆ ಈ ಸಾಧಕ.
ಮಂಗಳೂರು ನಗರದ ರಥಬೀದಿ ನಿವಾಸಿ ಜಗದೀಶ್ ಆಚಾರ್ಯ – ಶ್ಯಾಮಲಾ ಆಚಾರ್ಯ ದಂಪತಿ ಪುತ್ರ ಎಸ್.ಜೆ.ಶಮಂತ್ ಆಚಾರ್ಯ ಈ ಯುವ ಡ್ರೋನ್ ವಿಜ್ಞಾನಿ. ಡೊಂಗರಕೇರಿ ಕೆನರಾ ಹೈಸ್ಕೂಲ್ 10ನೇ ತರಗತಿ ಕಲಿಯತ್ತಿರುವ ಈತ 9ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಡ್ರೋನ್ ತಯಾರಿಸಬೇಕು ಎಂದು ನಿರ್ಧರಿಸಿದ ಶಮಂತ್ ಪರೀಕ್ಷೆ ಮುಗಿದು ವಾರ್ಷಿಕ ರಜೆಯಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ಅದರಲ್ಲಿ ಬಂದ ದುಡ್ಡಿನಲ್ಲಿ ಡ್ರೋನ್‌ಗೆ ಬೇಕಾದ ವಸ್ತುಗಳನ್ನು ಖರೀಸಿದ್ದಾರೆ.

ಜತೆಗೆ ವೆಬ್‌ಸೈಟ್, ಯೂಟ್ಯೂಬ್ ಸಹಾಯದಿಂದ ಡ್ರೋನ್ ತಯಾರಿಸುವುದು ಹೇಗೆ ಎಂದು ಕಲಿತು, ನಿರಂತರ ಪರಿಶ್ರಮದಿಂದ ಕೊನೆಗೂ ಆಕಾಶಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಮಂತ್ ಸಾಧನೆಗೆ ಹಲವು ಬಹುಮಾನ ಪ್ರಶಸ್ತಿಗಳು ಬಂದಿವೆ. ಬೆಸೆಂಟ್ ಕಾಲೇಜು, ಸುರತ್ಕಲ್‌ನ ಎನ್‌ಐಟಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ ವಿಜ್ಞಾನ ಇನ್‌ಸ್ಪಯರ್ ಅವಾರ್ಡ್ ಸ್ಪರ್ಧೆಯಲ್ಲಿ 10 ಸಾವಿರ ರೂ. ನಗದು ಬಹುಮಾನ ಸಿಕ್ಕಿತ್ತು. ಕಳೆದ ವರ್ಷದ ಕೇಂದ್ರ ಮೈದಾನದ ಚೌತಿ ಹಬ್ಬದ ಮೆರವಣಿಗೆ ದಿನ ಗಣೇಶನ ಮೂರ್ತಿಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡಿದ್ದರು.