LATEST NEWS
ಕರಾವಳಿಯಲ್ಲಿ ಇಂದಿನಿಂದ ರಮ್ಜಾನ್ ಉಪವಾಸ ಪ್ರಾರಂಭ

ಮಂಗಳೂರು/ಉಡುಪಿ: ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ಇಂದಿನಿಂದ ರಮ್ಜಾನ್ ತಿಂಗಳ ಉಪವಾಸ ಆರಂಭಗೊಂಡಿದೆ.
ಕೇರಳದ ಕಲ್ಲಿಕೋಟೆಯಲ್ಲಿ ಸೋಮವಾರ ರಮ್ಜಾನ್ ತಿಂಗಳ ಪ್ರಥಮ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ರಮ್ಜಾನ್ ತಿಂಗಳ ಉಪವಾಸ ಆಚರಿಸಲು ನಿರ್ಧರಿಸಲಾಗಿದೆ. ಎಂದು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸೂಚಿಸಿದ್ದಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ. ಅಬೂ ಬಕ್ಕರ್ ನೇಜಾರು ಹಾಗೂ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ತಿಳಿಸಿದ್ದಾರೆ.

ಇನ್ನು ಮಂಗಳವಾರದಿಂದ ಆರಂಭಗೊಂಡ ಉಪವಾಸ ಮುಂದಿನ ಒಂದು ತಿಂಗಳ ಕಾಲ ಇರಲಿದೆ. ಇನ್ನು ಈ ಸಮಯ ಮುಸಲ್ಮಾನ ಬಾಂಧವರಿಗೆ ಪವಿತ್ರವಾಗಿರುವ ಸಮಯವಾಗಿದ್ದು, ಉಪವಾಸ ಹಾಗೂ ಪ್ರಾರ್ಥನೆಗೆ ಹೆಚ್ಚಿನ ಸಮಯ ನೀಡಲಿದ್ದಾರೆ