Connect with us

    LATEST NEWS

    ಮೀನುಗಾರರ ಜೊತೆ ಸಮುದ್ರಕ್ಕೆ ತೆರಳಿ ಸಮಸ್ಯೆ ಆಲಿಸಿದ ಸಂಸದ ಡಿ.ಕೆ. ಸುರೇಶ್

    ಮಂಗಳೂರು, ಎಪ್ರಿಲ್ 13: ಸಂಸದ ಡಿ.ಕೆ. ಸುರೇಶ್ ಅವರು ಇತ್ತೀಚೆಗೆ ನಗರದ ಬಂದರು ಪ್ರದೇಶದಿಂದ ಸಮುದ್ರಲ್ಲಿ ಮೀನುಗಾರಿಕೆ ನಡೆಸೋದನ್ನು ಬೋಟ್ ಮೂಲಕ ತೆರಳಿ ವೀಕ್ಷಿಸಿದ್ದು, ಈ ವೇಳೆ ಮೀನುಗಾರರ ಜೊತೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೀನುಗಾರರ ದುಸ್ತರವಾದ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿ, ಸರ್ಕಾರ ಆದಷ್ಟು ಬೇಗ ಮೀನುಗಾರರ ಸಮಸ್ಯೆಗಳನ್ನು ಆಲಿಸಿ‌ ಶಾಶ್ವತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.

    ಮೀನುಗಾರಿಕೆ ಸಾಹಸಮಯ ಕೆಲಸ. ಇದೀಗ ಮೀನುಗಾರರು ಬಹಳ ಕಷ್ಟದಲ್ಲಿದ್ದು, ತಂತ್ರಜ್ಞಾನ ಅಳವಡಿಸಲು ಬೇಕಾದಷ್ಟು ಬಂಡವಾಳ ಇಲ್ಲ. ಮೀನುಗಾರಿಕೆಯನ್ನೇ ನಂಬಿಕೊಂಡು ಒಂದೂವರೆ ಲಕ್ಷಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿರೋದರಿಂದ 6.30 – 7 ರೂ. ಸಬ್ಸಿಡಿ ದೊರೆಯುತ್ತಿದೆ. ಮೀನುಗಾರಿಕೆಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಬಗ್ಗೆ ಸಂಬಂಧಪಟ್ಟ ನಾಯಕರು ಹಾಗೂ ಲೋಕಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಕೋವಿಡ್ ಸಂದರ್ಭದಲ್ಲಿ ಅನೇಕ ನಿರ್ಬಂಧಗಳನ್ನು ಹೇರಲಾಗಿದ್ದು, ಯಾವುದೇ ಆರ್ಥಿಕ ನೆರವು ದೊರಕಿಲ್ಲ.‌ ಆದ್ದರಿಂದ ಈ ಒಂದು ವರ್ಷದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಆದ್ದರಿಂದ ಸರ್ಕಾರ ಇವರ ಸಮಸ್ಯೆಗಳತ್ತ ಗಮನ ಹರಿಸಬೇಕು. ಕರಾವಳಿಯ ನಾಯಕರು ಮೀನುಗಾರರ ಪರವಾಗಿ ದನಿ ಎತ್ತುತ್ತಾರೆಂದು ಭಾವಿಸುತ್ತೇನೆ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply