Connect with us

FILM

ಅಮುಲ್ ಮ್ಯಾಚೊ ಜಾಹಿರಾತಿನಲ್ಲಿ ರಶ್ಮಿಕಾ ಮಂದಣ್ಣ…ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್

ಬೆಂಗಳೂರು: ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿರುವ ಜಾಹಿರಾತು ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚಾ ವಸ್ತುವಾಗಿ ಮಾರ್ಪಟ್ಟಿದೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರೊಂದಿಗೆ ಒಳ ಉಡುಪಿನ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರನ್ನು ಇದೇ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಒಳ ಉಡುಪು ತಯಾರಿಸುವ ‘ಅಮುಲ್ ಮ್ಯಾಚೊ‘ ಕಂಪನಿಯ ಒಳ ಉಡುಪಿನ ಒಂದು ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಹೇಳಿ ಕೊಡುತ್ತಿರುತ್ತಾರೆ. ಈ ವೇಳೆ ಯೋಗ ಪಟುಗಳಿಗೆ ಕೈ ಎತ್ತಲು ಹೇಳುತ್ತಾರೆ. ಆಗ ಅಲ್ಲಿದ್ದ ವಿಕ್ಕಿ ಕೌಶಲ್ ಕೈ ಎತ್ತಿದಾಗ ಅವರ ಒಳ ಉಡುಪು ಕಂಡು ರಶ್ಮಿಕಾ ಮಂದಣ್ಣ ಒಂದು ಕ್ಷಣ ಮೈ ಮರೆತು ನಿಲ್ಲುತ್ತಾರೆ.


ಇನ್ನೊಂದು ಜಾಹೀರಾತಿನಲ್ಲಿ ಯೋಗ ಕೋಣೆಗೆ ಮೊದಲೇ ರಶ್ಮಿಕಾ ಬಂದಿರುತ್ತಾರೆ. ನಂತರ ಬರುವ ವಿಕ್ಕಿ ಕೌಶಲ್‌ಗೆ ಬೇಕಂತಲೆ ರಾಕ್‌ನಲ್ಲಿಟ್ಟಿರುವ ಯೋಗಾ ಮ್ಯಾಟ್ ತೆಗೆಯಲು ಹೇಳುತ್ತಾರೆ. ಈ ವೇಳೆ ವಿಕ್ಕಿ ಕೌಶಲ್ ಅವರ ಒಳ ಉಡುಪು ಕಂಡು ಮುಗುಳ್ನಗೆ ಬೀರುತ್ತಾರೆ. ಇವೆರಡು ವಿಡಿಯೊ ಅಮುಲ್ ಮ್ಯಾಚೊ ಸ್ಪೋರ್ಟ್ಸ್ ಎಂಬ ಯೂಟ್ಯೂಬ್ ತಾಣದಲ್ಲಿ ಇವೆ.