Connect with us

KARNATAKA

ಗನ್ ಪಾಯಿಂಟ್ ನಲ್ಲಿ ನಿರಂತರ ಅತ್ಯಾಚಾರ – ಪ್ರಜ್ವಲ್ ರೇವಣ್ಣ ವಿರುದ್ದ ಮತ್ತೊಂದು ದೂರು

ಹಾಸನ ಮೇ 03 : ಇಡೀ ದೇಶದಲ್ಲೇ ಭಾರೀ ಸುದ್ದಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಸ್ಕ್ಯಾಂಡಲ್ ಗೆ ಇದೀಗ ಅತ್ಯಾಚಾರ ಪ್ರಕರಣವೂ ಸೇರಿಕೊಂಡಿದ್ದು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ತಮ್ಮ ಮೇಲೆ ಪ್ರಜ್ವಲ್ ರೇವಣ್ಣ 3 ವರ್ಷ ಅತ್ಯಾಚಾರ ವೆಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಮಹಿಳೆ ದೂರಿನಲ್ಲಿ ನಾನು ಜನಪರ ಕೆಲಸ ಮಾಡುತ್ತಿದ್ದು, ಅಧಿಕಾರಿಗಳಿಂದ ಕೆಲಸ ಮಾಡಿಸಲು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಪ್ರಜ್ವಲ್ ರೇವಣ್ಣ ಮೊದಲ ದಿನ ನನ್ನನ್ನು ಭೇಟಿ ಮಾಡಲಿಲ್ಲ. ಮರುದಿನ ಹಾಸನದ ಎಂಪಿ ನಿವಾಸಕ್ಕೆ ಪ್ರಜ್ವಲ್ ರೇವಣ್ಣ ತಮ್ಮನ್ನು ಕರೆಸಿಕೊಂಡಿಡರು. ನೆಲ ಮಹಡಿಯಲ್ಲಿ ಹೆಚ್ಚಿನ ಜನ ಇದ್ದರಿಂದ ಮೇಲ್ಮಹಡಿಯಲ್ಲಿ ಕಾಯುವಂತೆ ಹೇಳಿದ್ದಾರೆ. ಮೆಲ್ಮಹಡಿಯಲ್ಲಿ ಇನ್ನೂ ಕೆಲ ಮಹಿಳೆಯರು ಇದ್ದಾರೆ ಅವರ ಜೊತೆ ಕಾಯುವಂತೆ ಪ್ರಜ್ವಲ್​ ರೇವಣ್ಣ ಸಂತ್ರಸ್ತೆಗೆ ಹೇಳಿದ್ದಾರೆ.

 

ಸ್ವಲ್ಪ ಸಮಯದ ನಂತರ ಮೇಲೆ ಬಂದ ಪ್ರಜ್ವಲ್ ರೇವಣ್ಣ ಮೊದಲು ಬಂದಿದ್ದ ಮಹಿಳೆಯರನ್ನು ಮಾತಾಡಿಸಿ ಕಳುಹಿಸಿದ್ದಾರೆ. ನಾನು ಒಬ್ಬಳೇ ಉಳಿದುಕೊಂಡಿದ್ದೆ. ಎಲ್ಲರೂ ಹೋದ ನಂತರ, ನನ್ನ ಕೈ ಹಿಡಿದಿದ್ದ ಪ್ರಜ್ವಲ್, ಕೊಠಡಿಯೊಂದಕ್ಕೆ ಎಳೆದೊಯ್ದಿದ್ದರು. ಕೊಠಡಿ ಬಾಗಿಲು ಹಾಕಿಕೊಂಡು ಒಳಗಿನಿಂದ ಲಾಕ್ ಮಾಡಿದ್ದರು. ಲಾಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ, ಏನು ಆಗೊಲ್ಲ ಎಂದಿದ್ದರು’ ಎಂದೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ನನ್ನನ್ನು ಕೋಣೆಯೊಳೆಗೆ ಕರೆದು, ಬಾಗಿಲು ಹಾಕಿ ಕೈ ಹಿಡಿದು ಎಳೆದು ಮೈಮೆಲೆ ಎಳೆದುಕೊಂಡರು. ಸಂತ್ರಸ್ತೆ ಕೂಗಿಕೊಳ್ಳುವುದಾಗಿ ಹೇಳಿದಾಗ, ಪ್ರಜ್ವಲ್​ ರೇವಣ್ಣ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಿನ್ನ ಗಂಡನಿಂದ ನನ್ನ ತಾಯಿಯ ಎಂಎಲ್ಎ ಟಿಕೆಟ್ ತಪ್ಪಿದೆ. ಅವನು ಜಾಸ್ತಿ ಮಾತಾಡುತ್ತಾನೆ ಸುಮ್ಮನೆ ಇರಲು ಹೇಳು ಎಂದು ಬೆದರಿಸಿದರು. ಅಲ್ಲದೆ ನೀನು ರಾಜಕೀಯವಾಗಿ ಬೆಳೆಯಬೇಕಾದರೆ ನಾನು ಹೇಳಿದಂತೆ ಕೇಳು ಎಂದು ಹೇಳಿದರು.

“ನಂತರ, ಅವರು ನನ್ನ ಬಟ್ಟೆಗಳನ್ನು ಬಿಚ್ಚಲು ನನ್ನನ್ನು ಕೇಳಿದರು ಮತ್ತು ನಾನು ಅದಕ್ಕೆ ನಿರಾಕರಿಸಿದೆ.. ನಾನು ಸಹಾಯಕ್ಕಾಗಿ ಕಿರುಚುತ್ತೇನೆ ಎಂದು ಹೇಳಿದೆ. ನಂತರ ಪ್ರಜ್ವಲ್ ತಮ್ಮ ಬಂದೂಕು ಹಿಡಿದುಕೊಂಡು ಬಂದು, ನನ್ನನ್ನು ಹಾಗೂ ನನ್ನ ಪತಿಯನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಬಳಿಕ ಬಲವಂತವಾಗಿ ನನ್ನ ಬಟ್ಟೆಗಳನ್ನು ಬಿಚ್ಚಿ ನನ್ನ ಮೇಲೆ ಅತ್ಯಾಚಾರ ಮಾಡಿದರು. ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಯಾರಿಗಾದರೂ ತಿಳಿಸಿದರೆ ಇದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದರು. ಅದೇ ವೀಡಿಯೋಗಳನ್ನು ಇಟ್ಟುಕೊಂಡು ಫೋನ್ ಮೂಲಕ ವಿಡಿಯೋ ಕಾಲ್ ಮಾಡುತ್ತಿದ್ದರು. ಮತ್ತು ವಿಡಿಯೋ ಕಾಲ್ ನಲ್ಲೇ ನನಗೆ ಬೆತ್ತಲಾಗುವಂತೆ ಒತ್ತಾಯಿಸುತ್ತಿದ್ದರು. ಹೀಗೆ ಅವರು ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *