FILM
ಅತ್ಯಾಚಾರ ಆರೋಪ: ನಟ, ನಿರ್ಮಾಪಕ ವೀರೇಂದ್ರ ಬಾಬು ಬಂಧನ

ಬೆಂಗಳೂರು, ಆಗಸ್ಟ್ 12: ಸ್ವಯಂ ಕೃಷಿ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದ ಉದ್ಯಮಿ ವೀರೇಂದ್ರ ಬಾಬು ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿರುವುದಾಗಿ ವೀರೇಂದ್ರ ಬಾಬು ಮೇಲೆ ಕೇಸು ದಾಖಲಾಗಿತ್ತು. ಮಹಿಳೆಯ ಮೇಲಿನ ಅತ್ಯಾಚಾರದ ಆರೋಪದಲ್ಲಿ ಬಂಧಿಸಲಾಗಿದೆ.
ಕಳೆದ 2021ರಲ್ಲಿ ಪರಿಚಿತ ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಲ್ಲೇ, ಅತ್ಯಾಚಾರ ಮಾಡಿದ್ದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ಎನ್ನುವ ಆರೋಪವೂ ಬಾಬು ಮೇಲಿದೆ. ಜೊತೆಗೆ ಮಹಿಳೆಗೆ ಬೆದರಿಕೆವೊಡ್ಡಿ 15 ಲಕ್ಷ ಹಣ ಪೀಕಿದ್ದ ಎನ್ನಲಾಗುತ್ತಿದೆ. ಹಣ ನೀಡದಿದ್ದರೆ ವಿಡಿಯೋ ರಿಲೀಸ್ ಮಾಡೋದಾಗಿ ಹೇಳಿದ್ದನಂತೆ.
