FILM
ಸಾಯಬೇಕು ಅದ್ಕೊಂಡಿದ್ದೆ ಆದರೆ ರಾಹುಲ್ ಗಾಂಧಿ ಧೈರ್ಯ ತುಂಬಿದರು – ನಟಿ ರಮ್ಯ
ಬೆಂಗಳೂರು ಮಾರ್ಚ್ 28: ತಂದೆ ತೀರಿಕೊಂಡದ್ದು ನನ್ನ ಬದುಕಿನ ಅತ್ಯಂತ ದುಃಖದ ಕ್ಷಣ , ಆಗ ನಾನು ಪಟ್ಟ ನೋವು ಯಾವ ಮಟ್ಟಿನದಾಗಿತ್ತು ಅಂದರೆ ನಾನು ಜೀವನ ಕೊನೆಗೊಳಿಸೋಣ ಅಂದುಕೊಂಡಿದ್ದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಜೀ ಕನ್ನಡ ಜನಪ್ರಿಯ ಶೋ ‘ವೀಕೆಂಡ್ ವಿತ್ ‘ರಮೇಶ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ತಮ್ಮ ಬದುಕಿನ ಜರ್ನಿ ಬಗ್ಗೆ ಹೇಳಿಕೊಂಡ ಅವರು ತಮ್ಮ ಜೀವನದ ಅತೀ ಕಷ್ಟದ ಕ್ಷಣಗಳ ಬಗ್ಗೆ ಮಾತನಾಡಿ ಬಾವುಕರಾದರು.
ಈ ವೇಳೆ ರಾಜಕೀಯ ಜೀವನದ ಬಗ್ಗೆಯೂ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ರಾಹುಲ್ ಗಾಂಧಿ ಅವರು ಪ್ರಭಾವ ಬೀರಿರುವ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ, ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಸಮಯವಾಗಿತ್ತು. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದೆ. ಆದರೆ ಮಂಡ್ಯ ಜನರ ಪ್ರೀತಿ, ಅವರು ನೀಡಿದ ಧೈರ್ಯ, ತಂದೆ ಕಳೆದುಕೊಂಡು ದುಃಖದಲ್ಲಿದ್ದ ವೇಳೆ ರಾಹುಲ್ ಗಾಂಧಿ ಅವರು ಮಾಡಿದ ಸಹಾಯವನ್ನು ರಮ್ಯಾ ಈ ವೇಳೆ ನೆನಪಿಸಿಕೊಂಡರು,
ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೆಯವರು ನನ್ನ ತಂದೆ, ಮೂರನೇ ವ್ಯಕ್ತಿ ರಾಹುಲ್ ಗಾಂಧಿ’ ಎಂದ ರಮ್ಯಾ ‘ನನ್ನ ತಂದೆ ನಿಧನಹೊ೦ದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದೊಂಡಿದ್ದೆ. ಆಗ ನನಗೆ ಸಹಾಯ ಮಾಡಿದ್ದು ರಾಹುಲ್ ಗಾಂಧಿ . ಸಾವು ಅ೦ದರೇನು, ಬದುಕು ಅಂದರೇನು, ನಾವು ಯಾಕೆ ಈ ಜಗತ್ತಿಗೆ ಬಂದಿದ್ದೇವೆ ಅದೆಲ್ಲ ವಿವರಿಸಿ ರಾಹುಲ್ ಧೈರ್ಯ ತುಂಬಿದ್ದರು, ಅವರು ನನ್ನ ಬದುಕಿನ ಮೂರನೇ ಪ್ರಭಾವಶಾಲಿ ಎಂದು ಹೇಳಿದರು.