LATEST NEWS
ಭಾಷಣ ಮಾಡುವಾಗ ಪ್ರಧಾನಿ ಮೋದಿ ನಶೆಯಲ್ಲಿದ್ದರು – ನಟಿ ರಮ್ಯಾ ಟ್ವೀಟ್

ಭಾಷಣ ಮಾಡುವಾಗ ಪ್ರಧಾನಿ ಮೋದಿ ನಶೆಯಲ್ಲಿದ್ದರು – ನಟಿ ರಮ್ಯಾ ಟ್ವೀಟ್
ಬೆಂಗಳೂರು ಫೆಬ್ರವರಿ 5: ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮಾಜಿ ಸಂಸದೆ ರಮ್ಯಾ ತಮ್ಮ ಟ್ವೀಟರ್ ಖಾತೆಯಲ್ಲಿ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟ್ಯೋ ಎಂದು ವಾಖ್ಯಾನಿಸಿದ್ದರು.

ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ.
‘ನೀವು ನಶೆಯಲ್ಲಿದ್ದರೆ ಹೀಗೆ ಆಗೋದು’ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭಾಷಣವನ್ನು ಟ್ವಿಟರ್’ನಲ್ಲಿ ಟೀಕಿಸಿದ್ದರು.
ರಮ್ಯಾ ಅವರ ಈ ಟ್ವೀಟ್ ಗೆ ನಟ ಜಗ್ಗೇಶ್ ತಿರುಗೇಟು ನೀಡಿದ್ದಾರೆ.
ದೊಡ್ಡವರ ಬಗ್ಗೆ ಮಾತಾಡುವ ಮಂದಿಗೆ ವಯಸ್ಸು, ಅನುಭವ ಬೇಕು. ವಿಶ್ವದ ಬಲಿಷ್ಠ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪ ಈಕೆ ಎಂದು ಟ್ವೀಟಿಸಿದ್ದಾರೆ.