ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಕಳವು
ಉಡುಪಿ ಫೆಬ್ರವರಿ 4: ನಡುರಾತ್ರಿ ಮನೆಗೆ ನುಗ್ಗಿ ಮನೆ ಮಾಲಿಕ ಹಾಗೂ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ಕಾರ್ಕಳದ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಕಾರ್ಕಳದಲ್ಲಿ ಬಿಎಸ್ ಎನ್ ಎಲ್ ನಲ್ಲಿ ಕೆಲಸ ಮಾಡುತ್ತಿರುವ ಯಶೋಧ್ ಹಾಗೂ ಬ್ಯಾಂಕ್ ನಿವೃತ್ತ ಉದ್ಯೋಗಿ ಸಂಜೀವ್ ನಾಯ್ಕ್ ಅವರಿಗೆ ಸೇರಿದ ಮನೆಗೆ ನುಗ್ಗಿದ ಮೂವರು ಕಳ್ಳರು ಮನೆಯ ಹಿಂಬಾಗಿಲನ್ನು ತಟ್ಟಿದ್ದಾರೆ.

ಮನೆಯ ಮಾಲಿಕ ಶಬ್ದ ಕೇಳಿ ಯಾರೂ ಪರಿಚಯಸ್ಥರು ಇರಬಹುದೆಂದು ಬಾವಿಸಿ ಮನೆಯ ಬಾಗಿಲನ್ನು ತೆಗೆದಾಗ ಕಳ್ಳರು ಮಾರಾಕಾಯದವನ್ನು ತೋರಿಸಿ ಬೆದರಿಸಿ ಬಲಾತ್ಕಾರ ವಾಗಿ ಮನೆಯ ಒಳ್ಳಕ್ಕೆ ನುಗ್ಗಿ ಸಂಜೀವ್ ನಾಯ್ಕ್ ಎಂಬವರಿಗೆ ಗಂಭೀರವಾಗಿ ಹಲ್ಲೆ ನಡೆಸಿ ನಂತರ ಅತನ ಹೆಂಡತಿ ಯಶೋದ ಮೇಲೆ ಹಲ್ಲೆ ನಡೆಸಿದ್ದಾರೆ . ಮನೆಯಲ್ಲಿದ್ದ ಚಿನ್ನ ಹಾಗೂ ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ.

ಇದೀಗ ಹಲ್ಲೆಗೊಳಗಾದ ಸಂಜೀವ್ ನಾಯ್ಕ್ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿ ಗಳು ಬೇಟಿ ನೀಡಿದ್ದಾರೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬೇಟಿ ನೀಡಿ ತನಿಖೆಯನ್ನು ಮುಂದುವರೆಸಿದ್ದಾರೆ.