LATEST NEWS
ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಕರಾವಳಿಯಿಂದ ಪೇಜಾವರ ಶ್ರೀ, ಹೆಗ್ಗಡೆಯವರಿಗೆ ಆಹ್ವಾನ
ಮಂಗಳೂರು ಅಗಸ್ಟ್ 3: ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಿಂದೂಗಳ ಬಹುವರ್ಷಗಳ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ಭೂಮಿ ಪೂಜೆ ನೆರವೇರಲಿದೆ. ಅಂದು ನಡೆಯುವ ಭೂಮಿ ಪೂಜೆಗೆ ರಾಜ್ಯದಿಂದ ಕೇವಲ ಐವರನ್ನು ಆಹ್ವಾನಿಸಲಾಗಿದೆ. ಈ ಪೈಕಿ ಇಬ್ಬರು ಕರಾವಳಿಯ ಧಾರ್ಮಿಕ ಮುಖಂಡರಾಗಿದ್ದಾರೆ.
ಕೊವೀಡ್ ಕಾರಣಕ್ಕೆ ಕಾರ್ಯಕ್ರಮಕ್ಕೆ ಒಟ್ಟು 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ರಾಜ್ಯದಿಂದ ರಾಮ ಮಂದಿರ ನಿರ್ಮಾಣ ಟ್ರಸ್ಟಿ ಗಳಲ್ಲಿ ಓರ್ವರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರಿಗೆ ಅಹ್ವಾನ ನೀಡಲಾಗಿದೆ.
ಇದಲ್ಲದೆ ಶೃಂಗೇರಿ ಮಠ, ಆದಿಚುಂಚನಗಿರಿ ಶ್ರೀಗಳಿಗೆ ಹಾಗೂ ಸುತ್ತೂರು ಮಠಾಧೀಶರಿಗೆ ಆಹ್ವಾನ ಬಂದಿದೆ. ರಾಮಮಂದಿರಕ್ಕೆ 1989 ರಲ್ಲಿ ಶಿಲಾನ್ಯಾಸ ನಡೆದಿತ್ತು. ಸುಪ್ರೀಂಕೋರ್ಟ್ ಆದೇಶದ ನಂತರ ರಾಮಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ನಾಳೆ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದೆ.