Connect with us

UDUPI

ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿ

ಉಡುಪಿ ಜುಲೈ 18: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾಗುವ ಹಣ ಹೊಂದಿಸಲು ನವೆಂಬರ್ 25 ರಿಂದ ಡಿಸೆಂಬರ್ 25 ರ ತನಕ ದೇಶದಾದ್ಯಂತ ವ್ಯಾಪಕ ಆಂದೋಲನ ನಡೆಸಲು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.


ಇಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.. ಟ್ರಸ್ಟ್ ವಿಶ್ವಸ್ಥರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮ ಮಂದಿರ ವಿಚಾರವಾಗಿ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, ಮುಂದೆ ನಿರ್ಮಾಣವಾಗಲಿರುವ ಅಯೋದ್ಯ ರಾಮ ಮಂದಿರ ಜಾಗದ ಸುಮಾರು 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಹೇಗೆ ಇದೆ ಎನ್ನುವ ಅಧ್ಯಯನ ಈಗಾಗಲೇ ಆರಂಭವಾಗಿದ್ದು, ಎಲ್ ಆಂಡ್ ಟಿ‌ ಕಂಪೆನಿ ಮಂದಿರ ಮೂಲಕ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ.

ಅಲ್ಲದೇ 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಮಾಡಲಾಗಿದ್ದು, ತಾಮ್ರ ಪತ್ರದಲ್ಲಿ ಬರೆಯಬೇಕಾದ ವಿವರದ ಕುರಿತು ಚರ್ಚೆ ನಡೆಸಲಾಯಿತು ಅಂತ ಶ್ರೀಗಳು ವಿವರಿಸಿದರು..ಇನ್ನೂ ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣವಾಗಿದ್ದು, ಎಪ್ಪತ್ತು ಎಕರೆ ಪರಿಸರ ಅಭಿವೃದ್ದಿಗೆ ಸಾವಿರ ಕೋಟಿ ರೂ ಅವಶ್ಯಕತೆ ಇದೆ. ಹಣ ಹೊಂದಿಸುದದ ಬಗ್ಗೆ ಕೂಡ ಚರ್ಚಿಸಲಾಗಿದ್ದು, ಬೇರೆ ಬೇರೆ ಕಂಪೆನಿಗಳ‌ ಸಿಎಸ್ ಆರ್ ಫಂಡ್ ಮೂಲಕ ಹಣ ಸಂಗ್ರಹ ಮಾಡುವುದು ಹಾಗೂ ಪ್ರತೀ ವ್ಯಕ್ತಿಯಿಂದ ಹತ್ತು ರುಪಾಯಿಯಂತೆ ಹಾಗೂ ಮನೆಯಿಂದ ನೂರು ರುಪಾಯಿ ಸಂಗ್ರಹಕ್ಕೆ ಚಿಂತನೆ ಮಾಡಲಾಗಿದೆ ಅಂತ ಪೇಜಾವರ ಶ್ರೀಗಳು ತಿಳಿಸಿದರು.

ನವೆಂಬರ್ 25 ರಿಂದ ಡಿಸೆಂಬರ್ 25 ತನಕ ದೇಶಾದ್ಯಂತ ವ್ಯಾಪಕ ಆಂಧೋಲನಕ್ಕೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಭೂಮಿ ಪೂಜನಾ ಕಾರ್ಯ ಯಾವಾಗ ನಡೆಸೋದು ಎಂದು ಶೀಘ್ರ ತೀರ್ಮಾನ ಕೈಗೊಂಡು, ಹದಿನೈದು ದಿನಗಳ ಮುಂದೆ ಭೂಮಿ ಪೂಜೆಯ ದಿನಾಂಕ ಘೋಷಣೆ ಮಾಡಲಾಗುವುದು ಅಂತ ಪೇಜಾವರ ಶ್ರೀಗಳು ತಿಳಿಸಿದರು..

Share Information
Continue Reading
Advertisement
Click to comment

Leave a Reply

Your email address will not be published. Required fields are marked *