Connect with us

UDUPI

ಕಾಪು ಪೊಲೀಸ್ ಠಾಣೆ ಮತ್ತೆ ಸೀಲ್ ಡೌನ್

ಉಡುಪಿ ಜುಲೈ 19: ಕೊರೋನಾ ಮಹಾಮಾರಿ ಉಡುಪಿ ಜಿಲ್ಲೆಯಲ್ಲಿ ‌ಅಟ್ಟಹಾಸ‌ ಮುಂದುವರೆಸಿದ್ದು, ಪೊಲೀಸ್ ಇಲಾಖೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದೆ. ಆದರೂ ಜಿಲ್ಲೆಯಲ್ಲಿ ಕೊರೊನಾ ಸೊಂಕು ನಿಯಂತ್ರಣಕ್ಕೆ ಬಂದಿಲ್ಲ.


ಇಂದು ಕಾಪು ಪೊಲೀಸ್ ಠಾಣೆಯ ಮತ್ತೆ ನಾಲ್ಕು ಮಂದಿ ಪೊಲೀಸರಿಗೆ ಪಾಸಿಟಿವ್ ಬಂದಿದೆ. ಕಳೆದ ವಾರ ಎಎಸ್ ಐ ಹಾಗೂ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಕಂಡುಬಂದಿತ್ತು. ಪರಿಣಾಮ ಕಾಪು ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಿ ಪಕ್ಕದ ಸಭಾ ಭವನಕ್ಕೆ ಠಾಣೆಯನ್ನ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿತ್ತು.


ಆದರೆ, ಎರಡು ದಿನಗಳ ಬಳಿಕ ಠಾಣೆಯಲ್ಲಿ ಚಟುವಟಿಕೆ ಶುರುವಾಗಿದ್ದೇ ಇದೀಗ ಮತ್ತೆ ನಾಲ್ಕು ಮಂದಿ ಪೊಲೀಸರಿಗೆ ಪಾಸಿಟಿವ್ ಕಂಡು ಬಂದಿದೆ.‌ ಪರಿಣಾಮ ಇದೀಗ ಕಾಪು ಪೊಲೀಸ್ ಠಾಣೆಯಲ್ಲಿ ಒಟ್ಟು 9 ಮಂದಿ ಪೊಲೀಸರು ಕೋವಿಡ್ 19ಗೆ ತುತ್ತಾದಂತಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಇಡೀ ಪೊಲೀಸ್ ಠಾಣೆಯನ್ನು ಮತ್ತೊಮ್ಮೆ ಸೀಲ್ ಡೌನ್ ಮಾಡಲಾಗಿದೆ.

Facebook Comments

comments