DAKSHINA KANNADA
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ, ಉಗ್ರ ಮುಜಾಮಿಲ್ ಶರೀಫ್‌ಗೆ ಬಾಡಿಗೆ ಮನೆ ಮಾಡಿ ಕೊಟ್ಟ ಮಂಗಳೂರು ಪೊಲೀಸ್ ಇನ್ಸ್‌ಪೆಕ್ಟರ್..!?
ಚಿಕ್ಕಮಗಳೂರು : ನಾಡನ್ನು ತಲ್ಲಣಗೊಳಿಸಿದ್ದ ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಆನೇಕ ರಹಸ್ಯಗಳನ್ನು ಹೊರ ಹಾಕಿದ್ದು ಆರೋಪಿಗೆ ಸಹಾಯ ಮಾಡಿದ್ದ ಮಂಗಳೂರಿನ ಪೊಲೀಸ್ ಅಧಿಕಾರಿ ಮೇಲೂ ತನಿಖೆ ನಡೆಯುವ ಸಾಧ್ಯತೆಗಳಿವೆ.
ಪ್ರಕರಣದಲ್ಲಿ ಬಂಧಿನಾಗಿರುವ ಆರೋಪಿ ಮುಜಾಮಿಲ್ ಶರೀಫ್ ಗೆ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆ ಕೊಡಿಸುವಲ್ಲಿ ಆಗ ಚಿಕ್ಕಮಗಳೂರಿನಲ್ಲಿ ಕರ್ತವ್ಯ ಮಾಡುತ್ತಿದ್ದ ಪೊಲೀಸ್ ಅಧಿಕಾರಿ ಒರ್ವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಸ್ಪೋಟಕ ಅಂಶ ಬಯಲಾಗಿದೆ.
ಪ್ರಸ್ತುತ ಆ ಪೊಲೀಸ್ ಅಧಿಕಾರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿ್ದ್ದಾರೆ ಎಂದು ತಿಳಿದುಬಂದಿದೆ. ಕಳೆದ 2 ವರ್ಷಗಳಿಂದ ಮುಜಾಮಿಲ್ ಶರೀಫ್ ಗೆ ಅಯ್ಯಪ್ಪ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದನು. ಆ ಮನೆ ಆತನಿಗೆ ಬಾಡಿಗೆ ನೀಡುವಂತೆ ಆ ಪೊಲೀಸ್ ಇನ್ಸ್‌ಪೆಕ್ಟರ್ ಮನೆ ಮಾಲಿಕರಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ. ಮುಜಾಮಿಲ್‌ನ ತಾಯಿ ಮತ್ತು ತಂಗಿ ಈ ಮನೆಯಲ್ಲಿ ವಾಸಿಸುತ್ತಿದ್ದರು. ಬೆಂಗಳೂರಿನಲ್ಲಿದ್ದ ಮುಜಾಮಿಲ್ ವಾರಕ್ಕೆ ಒಂದು ಬಾರಿ ಇಲ್ಲಿಗೆ ಬಂದು ಹೋಗುತ್ತಿದ್ದನು. ತನಿಖಾಧಿಕಾರಿಗಳು ಮುಜಾಮಿಲ್ ಬಂಧನದ ಬಳಿಕ ಈ ಮನೆಗೆ ಭೇಟಿ ನೀಡಿದ್ದರು. ಆದ್ರೆ 2 ಮೂರು ದಿನಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಬಾಡಿಗೆ ಮನೆ ಕೊಟ್ಟ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.