BANTWAL
ಮಾಜಿ ಸಚಿವ ರಮಾನಾಥ ರೈ ಅವರ ಹಾಡಿನ ವೈಖರಿ

ಮಾಜಿ ಸಚಿವ ರಮಾನಾಥ ರೈ ಅವರ ಹಾಡಿನ ವೈಖರಿ
ಬಂಟ್ವಾಳ ಸೆಪ್ಟೆಂಬರ್ 16: ದಕ್ಷಿಣಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೇಸ್ ನಾಯಕ ಹಾಗೂ ಮಾಜಿ ಸಚಿವ ರಮಾನಾಥ ರೈ ತಾವೊಬ್ಬ ಅತ್ಯುತ್ತಮ ಹಾಡುಗಾರ ಎನ್ನುವುದನ್ನು ತೋರಿಸಿದ್ದಾರೆ.
ರಾಜಕೀಯ ಜೀವನದಲ್ಲಿ ಪಳಗಿರುವ ಮಾಜಿ ಸಚಿವ ಬಿ.ರಮಾನಾಥ ರೈ ಒಬ್ಬ ಕ್ರೀಡಾಪಟು ಮಾತ್ರವಲ್ಲದೇ ಒಬ್ಬ ಉತ್ತಮ ಹಾಡುಗಾರರು ಕೂಡಾ. ಈ ಹಿಂದೆಯೂ ಸಾರ್ವಜನಿಕ ಸಮಾರಂಭದಲ್ಲಿ ಹಾಡುವ ಮೂಲಕ ಜನರನ್ನು ಹುಬ್ಬೆರಿಸುವಂತೆ ಮಾಡಿದ್ದರು.

ನಿನ್ನೆ ಬಂಟ್ವಾಳ ಜಕ್ರಿಬೆಟ್ಟುವಿನಲ್ಲಿ ನಡೆದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ರೈಗಳು ಮತ್ತೆ ಹಾಡಿದ್ದಾರೆ. ಬರ್‌ಸಾತ್ ಚಿತ್ರದ ಜಿಂದಗಿ ಬರ್ ನಹೀ ಬೂಲೆಗೀ ಬರ್‌ಸಾತ್ ಕೀ ರಾತ್…ಏಕ್ ಹಸೀನಾಸೆ ಮುಲಾಕಾತ್ ಕೀ ರಾತ್…ಹಾಡು ಹಾಗೂ ತುಳುವಿನಲ್ಲಿ ಮೋಕೆದ ಸಿಂಗಾರಿ…ಉಂತುದೆ ವೈಯ್ಯಾರಿ ಹಾಡನ್ನು ಕಲಾವಿದನ ಜತೆ ಹಾಡುವ ಮೂಲಕ ಜನರ ಹುಬ್ಬೇರಿಸುವಂತೆ ಮಾಡಿದ್ದಲ್ಲದೇ, ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡಿದ್ದಾರೆ.
ಕಳೆದ ಬಾರಿಯೂ ಜಕ್ರಿಬೆಟ್ಟುವಿನಲ್ಲಿ ನಡೆದಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹಾಡಿ ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಸಾಕಷ್ಟು ಡಲ್ ಆಗಿದ್ದ ರಮಾನಾಥ ರೈ ಇದೀಗ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಇದಕ್ಕಾಗಿ ಪ್ರತೀ ಕಾರ್ಯಕ್ರಮಗಳಿಗೆ ತೆರಳಿ ಜನರೊಂದಿಗೆ ಬೆರೆಯುತ್ತಿರುವ ರೈ, ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಪಡೆಯುವ ಇಚ್ಛೆ ಹೊಂದಿದ್ದಾರೆ.