Connect with us

  LATEST NEWS

  ಜಿಲ್ಲೆಯಲ್ಲಿ ಮತ್ತೆ ಫೀನಿಕ್ಸ್ ನಂತೆ ಕಾಂಗ್ರೇಸ್ ಎದ್ದು ಬರಲಿದೆ – ರಮಾನಾಥ ರೈ

  ಮಂಗಳೂರು ಫೆಬ್ರವರಿ 15: ಜಿಲ್ಲೆಯಲ್ಲಿ ಕಾಂಗ್ರೇಸ್ ಮತ್ತೆ ಫೀನಿಕ್ಸ್ ನಂತೆ ಎದ್ದು ಬರಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.


  ಮಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಫೆಬ್ರವರಿ 17ರಂದು ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕಾಲೇಜು ಎದುರಿನ ಗ್ರೌಂಡಲ್ಲಿ ನಡೆಯಲಿದೆ. ಈಗಾಗಲೇ ಪೂರ್ವ ಸಿದ್ಧತೆ ಮಾಡಿದ್ದು, ಯಶಸ್ವಿಯಾಗಿ ನಡೆಸಲಾಗುವುದು. ಇದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಸೃಷ್ಟಿಯಾಗಿದೆ ಎಂದರು. ಉಭಯ ಜಿಲ್ಲೆಗಳಲ್ಲಿ ಕಾಂಗ್ರೇಸ್ ಪಕ್ಷದ ಜನಪ್ರತಿನಿಧಿಗಳಿಲ್ಲದಿದ್ದರೂ ಭವಿಷ್ಯದಲ್ಲಿ ಮತ್ತೆ ಕೈ ಫೀನಿಕ್ಸ್ ನಂತೆ ಹೊರಬರಲಿದೆ. ಕಾರ್ಯಕರ್ತರು ಎಷ್ಟೇ ತೊಂದರೆ ಆದರೂ ಸಂಘ ಪರಿವಾರ ಜತೆ ನಿರಂತರ ಹೋರಾಟ ಮಾಡಿ ಬಂದ ಕಾರ್ಯಕರ್ತರು ಈಗಲೂ ಬಲಿಷ್ಟವಾಗಿದ್ದಾರೆ. ಈ ಸಮ್ಮೇಳನ ದೇಶಕ್ಕೆ ಸಂದೇಶ ನೀಡುವ ಸಮ್ಮೇಳನ ಆಗಲಿದೆ.

  ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದಾಗ ಅದು ಕೇವಲ ಬೋಗಸ್ ಎಂದು ಬಿಜೆಪಿ ಹೇಳಿತ್ತು. ಆದರೆ ಕೇಂದ್ರ ಸರಕಾರದ ಅಸಹಕಾರದ ನಡುವೆಯೂ ಗ್ಯಾರಂಟಿ ಸ್ಕೀಮ್ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂದು ಹೇಳಿದ ರಮಾನಾಥ ರೈ, ಬಡವರಿಗೆ ಅಗತ್ಯವಾದ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ಕಾಂಗ್ರೆಸ್ನ ಇತಿಹಾಸ ಬಲಿಷ್ಠವಾಗಿದೆ. ಇಂದಿರಾ ಗಾಂಧಿಯವರ 20 ಅಂಶಗಳ ಆರ್ಥಿಕ ಕಾರ್ಯಕ್ರಮ, ಭೂ ಮಸೂದೆ, ಬಗರ್ ಹುಕುಂ ಕಾಯ್ದೆಗಳಿಂದ ಹಿಂದೆ ಗ್ರಾಮಗಳಲ್ಲಿ ಒಂದಿಬ್ಬರು ಭೂ ಒಡೆತನ, ಹಕ್ಕುಪತ್ರ ಹೊಂದಿದ್ದರೆ ಪ್ರಸಕ್ತ ಸಾವಿರಾರು ಮಂದಿಯಾಗಿದ್ದಾರೆ. ಈ ಎಲ್ಲಾ ಸೌಲಭ್ಯಗಳು ಆಕಾಶದಿಂದ ಉದುರಿರುವುದಲ್ಲ. ಸೈದ್ಧಾಂತಿಕ ಕಾನೂನಿನ ಮೂಲಕ ಜಾರಿಯಾಗಿರುವುದು ಎಂದು ಅವರು ಹೇಳಿದರು.

  Share Information
  Advertisement
  Click to comment

  You must be logged in to post a comment Login

  Leave a Reply