LATEST NEWS
ಮತೀಯವಾದ ಅನ್ನೋದು ಒಂದು ಸೀಸನಲ್ ಜ್ವರ ಇದ್ದ ಹಾಗೆ ಕಾಲಕ್ರಮೇಣ ಆ ಜ್ವರ ಕಡಿಮೆಯಾಗುತ್ತೆ – ರಮಾನಾಥ ರೈ

ಮಂಗಳೂರು ಫೆಬ್ರವರಿ 17: ಕಾಂಗ್ರೆಸ್ ಸಮಾವೇಶ ನಡೆಯುವ ಸ್ಥಳಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ ನೀಡಿ ಸಮಾವೇಶದ ಸಿದ್ದತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಮತೀಯವಾದ ಅನ್ನೋದು ಒಂದು ಸೀಸನಲ್ ಜ್ವರ ಇದ್ದ ಹಾಗೆ ಕಾಲಕ್ರಮೇಣ ಆ ಜ್ವರ ಕಡಿಮೆಯಾಗುತ್ತೆ ಎಂದರು.
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಮತೀಯವಾದಕ್ಕೆ ಪುಷ್ಠಿ ಕೊಡುವ ಕ್ಷೇತ್ರ, ಆ ಕಾರಣಕ್ಕಾಗಿ ಇಲ್ಲಿ ನಿರಂತರವಾಗಿ ಮತೀಯವಾದಿ ಪಕ್ಷ ಇಲ್ಲಿ ಗೆಲ್ಲುತ್ತಿದೆ. ಆದರೆ ಈ ಬಾರಿ ಆ ರೀತಿ ನಡೆಯಲ್ಲ. ಮತೀಯವಾದ ಅನ್ನೋದು ಒಂದು ಸೀಸನಲ್ ಜ್ವರ ಇದ್ದ ಹಾಗೆ ಕಾಲಕ್ರಮೇಣ ಆ ಜ್ವರ ಕಡಿಮೆಯಾಗುತ್ತೆ. ದಕ್ಷಿಣಕನ್ನಡದಲ್ಲೂ ಇದೇ ಪರಿಸ್ಥಿತಿ ಆಗಲಿದೆಯ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ.

ಆದರೆ ಪ್ರತಿಬಾರಿಯೂ ಈ ತಂತ್ರ ನಡೆಯಲ್ಲ ಎಂದರು. ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಘೋಷಣೆ ಈ ಸಮಾವೇಶದಲ್ಲಿ ನಡೆಯುವುದಿಲ್ಲ, ಪಕ್ಷದ ಹೈಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸರ್ವೇ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ.
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷ ನನಗೆ ಎಲ್ಲಾ ಅವಕಾಶ ನೀಡಿದೆ ಈ ಬಾರಿ ಲೋಕಸಭಾ ಚುನಾವಣೆಗೆ ಅವಕಾಶ ದೊರೆತಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.