LATEST NEWS
ಸಚಿವ ರೈ ವಿರುದ್ಧ ದೂರಿನ ವಿಚಾರಣೆ ಅಕ್ಟೋಬರ್ 16 ನಿಗದಿ
ಸಚಿವ ರೈ ವಿರುದ್ಧ ದೂರಿನ ವಿಚಾರಣೆ ಅಕ್ಟೋಬರ್ 16 ನಿಗದಿ
ಮಂಗಳೂರು,ಅಕ್ಟೋಬರ್ 10: ಸಚಿವ ರಮಾನಾಥ ರೈ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಡೆಸಿದ ಅವಹೇಳನಕಾರಿ ಭಾಷಣದ ಕುರಿತಂತೆ ಮಂಗಳೂರು ಜೆ.ಎಮ.ಎಫ್.ಸಿ 2 ನೇ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 16 ಕ್ಕೆ ಮುಂದೂಡಿದೆ.
ಇಂದು ದೂರುದಾರ ರಹೀಂ ಉಚ್ಚಿಲ್ ಹಾಗೂ ಸಾಕ್ಷೀದಾರ ಅಶ್ರಫ್ ಹರೆಕಳರವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ಮಂಗಳೂರು ಹೊರವಲಯದ ಅಸೈಗೋಳಿಯಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ ಸಚಿವ ರೈ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಸಂವಿಧಾನಿಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಸಂಬಂಧ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಸಚಿವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರುದಾರರ ಪರವಾಗಿ ನ್ಯಾಯವಾದಿ ಎಸ್.ಎಸ್.ಖಾಝಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
You must be logged in to post a comment Login