DAKSHINA KANNADA
ಸಚಿವ ರೈ ಮತ್ತೊಂದು ವಿವಾದಿತ ವಿಡಿಯೋ ವೈರಲ್

ಸಚಿವ ರೈ ಮತ್ತೊಂದು ವಿವಾದಿತ ವಿಡಿಯೋ ವೈರಲ್
ಮಂಗಳೂರು,ಸೆಪ್ಟಂಬರ್ 23: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತೊಂದು ಅವಾಂತರ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್ ಹಾಗೂ ಫೇಸ್ಬುಕ್ ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ.

ಇದರಲ್ಲಿ ರಮಾನಾಥ ರೈ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿಯಾಗಿ ಸಾರ್ವಜನಿಕವಾಗಿ ಮಾತನಾಡುತ್ತಿರುವುದು ಈ ವಿಡಿಯೋದಲ್ಲಿದೆ. ಮಂಗಳೂರು ಹೊರವಲಯದ ಅಸೈಗೋಳಿ ಎಂಬಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ ಕಾಂಗ್ರೇಸ್ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡುತ್ತಿರುವ ಸಚಿವ ರಮಾನಾಥ ರೈ ಜವಾಹರಲಾಲ್ ನೆಹರೂ ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ದಿನವಾದರೂ ಜೈಲಿನಲ್ಲಿ ಕೂತವರು.
ಅಂತವರ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಎಂದು ಮೊದಲು ಪದ ಪ್ರಯೋಗಿಸಿದ ಬಳಿಕ ವೇದಿಕೆಯಲ್ಲಿ ಆಸೀನರಾಗಿದ್ದ ತನ್ನದೇ ಪಕ್ಷದ ಮುಖಂಡರಲ್ಲಿ ಚಕ್ರವತ್ರಿ ಸೂಲಿಬೆಲೆ, ಸೂಲೆಮಗೆ ಎಂದಿದ್ದಾರೆ.
ಅಲ್ಲದೆ ಪದೇ ಪದೇ ವೇದಿಕೆಯಲ್ಲಿದ್ದ ಮುಖಂಡರನ್ನು ಉದ್ದೇಶಿಸಿ ಚಕ್ರವರ್ತಿ ಸೂಲೆ ಎಂದಾಗ ವೇದಿಕೆಯಲ್ಲಿದ್ದ ಕೆಲವರು ಸೂಲೆಮಗೆ ಎನ್ನುತ್ತಿರುವ ಧ್ವನಿ ಕೇಳುತ್ತಿದೆ. ಅದನ್ನು ಕೇಳಿ ಅಸ್ವಾದಿಸುವ ಸಚಿವರು ಬಳಿಕ ತನ್ನ ಭಾಷಣವನ್ನು ಮುಂದುವರಿಸುತ್ತಿರುವುದು ಈ ವಿಡಿಯೋ ತುಣುಕಿನಲ್ಲಿದೆ.