Connect with us

    LATEST NEWS

    ಬಿಜೆಪಿಗೆ ಮಾಡಿದ್ದುಣ್ಣೊ ಮಾರಾಯ – ವಿಧಾನಪರಿಷತ್ ಸದಸ್ಯ ಭೋಜೇಗೌಡ

    ಬಿಜೆಪಿಗೆ ಮಾಡಿದ್ದುಣ್ಣೊ ಮಾರಾಯ – ವಿಧಾನಪರಿಷತ್ ಸದಸ್ಯ ಭೋಜೇಗೌಡ

    ಉಡುಪಿ ನವೆಂಬರ್ 1:  ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರನ್ನು ನಿಲ್ಲಿಸಿದ್ದಕ್ಕೆ ಬಿಜೆಪಿಯ ಹಿರಿಯ ನಾಯಕರು, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದ್ದಾರೆ ಎಂದಿದ್ದಾರೆ. ಇದು ಎಷ್ಟು ಸರಿ? ಹಾಗಾದರೆ ಬಿಜೆಪಿಯವರು ರಾಮನಗರದಲ್ಲಿ ಕಂಡವರ ಮಕ್ಕಳನ್ನು ನಿಲ್ಲಿಸಿದ್ದಾರಾ..

    ದೀಪಾವಳಿ ಹಬ್ಬದ ಉಡುಗೊರೆಯಾಗಿ ರಾಮನಗರದಲ್ಲಿ ಜೆಡಿಎಸ್ ಗೆಲ್ಲಲಿದೆ,ಇದನ್ನು ನೀವು ದೀಪಾವಳಿಯ ಉಡುಗೊರೆಯಾಗಿ ಸ್ವೀಕರಿಸ್ತೀರಾ?. ಮಾತಾಡುವಾಗ ಎಚ್ಚರಿಕೆ ಬೇಕು.

    ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ವಿಚಾರ_ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಹಿಂಪಡೆದದ್ದು ಬಿಜೆಪಿಗೆ ಆಘಾತದ ವಿಷಯ. ಗೆದ್ದಂತಹ ಶಾಸಕರನ್ನೇ ಖರೀದಿಸಲು ಪ್ರಯತ್ನಿಸಿದವರು ಬಿಜೆಪಿಯವರು. ಇದು ಪ್ರಜಾಪ್ಭುಭುತ್ವಕ್ಕೆ ಮಾರಕ‌ ಅಂತ ಅನ್ನಿಸಿಲ್ವೇ ಆಗ? ಮಾಡಿದ್ದುಣ್ಣೊ ಮಾರಾಯ ಎಂಬ ಗಾದೆಯಂತಾಗಿದೆ ಬಿಜೆಪಿ ಸ್ಥಿತಿ ಎಂದು ವಿಧಾನಪರಿಷತ್ ಸದಸ್ಯ ಬೋಜೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲಿದೆ
    ಶಿವಮೊಗ್ಗದಲ್ಲಿ ಮಧುಗೆ ಗೆಲುವು ಶತಃಸಿದ್ಧ. ನಾಲ್ಕು ತಿಂಗಳ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.ಇದರ ಆಧಾರದ ಮೇಲೆ ಜನ ಮತ ನೀಡಿ ಗೆಲ್ಲಿಸುತ್ತಾರೆ

    ಮರಳು ಸಮಸ್ಯೆ ವಿಚಾರ_ ಮುಖ್ಯಮಂತ್ರಿಗಳು ಕರಾವಳಿ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಆದೇಶ ನೀಡಿದ್ದಾರೆ
    ಇದು ಬಿಜೆಪಿಯವರಿಗೂ ಗೊತ್ತಿದೆ.

    ಸಿಎಂಗೆ ಡಿಸಿಯನ್ನು ಕಂಟ್ರೋಲ್ ಮಾಡುವ ಶಕ್ತಿ ಇಲ್ಲವೇ ಎಂದು ಬಿಜೆಪಿಯ ಮೇಲ್ಮನೆ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಇದು ಎಷ್ಟು ಸರಿ? ಜನರನ್ನು ತಪ್ಪು ದಾರಿಗೆ ಎಳೀಬೇಡಿ ಎಂದು ಹೇಳಿದರು.

    ಸಿಎಂ ಉಡುಪಿಗೆ ಬಂದಾಗ ನೀತಿ ಸಂಹಿತೆ ಇತ್ತು ಎಂಬುದು ಗೊತ್ತಿರಲಿ, ನಿಮ್ಮ‌ ನಾಲಿಗೆಯನ್ನು ಹಿಡಿತದಲ್ಲಿ ಇಟ್ಕೊಳಿ, ಮರಳುಗಾರಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿದರು. ಜನರ ಸಮಸ್ಯೆಗೆ ಪರಿಹಾರ ಸಿಗೋದು ಮುಖ್ಯ
    ನಮಗೂ ಜವಾಬ್ದಾರಿ ಇದೆ,ನಿಮಗೆ ಮಾತ್ರ ಅಲ್ಲ ಎಂದು ಹೇಳಿದ ಅವರು
    ಸಿಆರ್ ಝಡ್ ,ನಾನ್ ಸಿಆರ್ ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಿಷೇಧ ಮಾಡಿದ್ದು ಯಾರು? ಕೇಂದ್ರದ ಪಾತ್ರವೂ ಇದರಲ್ಲಿದೆ.

    ನಿಮ್ಮ ಬಿಜೆಪಿ ಮುಖಂಡರಿಗೂ ಜವಾಬ್ದಾರಿ ಇದೆ.ಜಿಲ್ಲಾಧಿಕಾರಿಯನ್ನು ದೂಷಿಸುವಾಗ ಕೇಂದ್ರದ ಪಾತ್ರ ಏನು ಎಂಬುದು ತಿಳಿದುಕೊಳ್ಳಿ ಕೇಂದ್ರದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಆದರೆ ಇದರಲ್ಲಿ ರಾಜಕೀಯ ಬೆರೆಸಬೇಡಿ. ಸಾಂಪ್ರದಾಯಿಕ‌ ಮರಳುಗಾರಿಕೆಗೆ ಈಗಾಗಲೇ ಅನುಮತಿ‌ ನೀಡಲಾಗಿದೆ. ಹೀಗಿದ್ದರೂ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸುತ್ತಿದ್ದೀರಿ, ಚುನಾವಣೆ ಮುಗಿದ ತಕ್ಷಣ ಸಿಎಂ ಈ ಸಂಬಂಧ ಇನ್ನೊಂದು ಸಭೆ ಕರೆಯಲಿದ್ದಾರೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *