LATEST NEWS
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ಪ್ರಮುಖ ಅಜೆಂಡಾ: ಆರ್ ಎಸ್ ಎಸ್ ಬೈಠಕಿನಲ್ಲಿ ನಿರ್ಧಾರ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ಪ್ರಮುಖ ಅಜೆಂಡಾ: ಆರ್ ಎಸ್ ಎಸ್ ಬೈಠಕಿನಲ್ಲಿ ನಿರ್ಧಾರ
ಮಂಗಳೂರು, ನವೆಂಬರ್ 15 : ರಾಜಕೀಯ ಚಾಣಕ್ಯ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್‌ಎಸ್ಎಸ್ ಮುಖಂಡರ ಸಭೆ ಮುಕ್ತಾಯವಾಗಿದೆ. ಮಂಗಳೂರಿನ ಆರ್ ಎಸ್ ಎಸ್ ನ ಶಕ್ತಿ ಕೇಂದ್ರ ಸಂಘನಿಕೇತನದಲ್ಲಿ ತಡರಾತ್ರಿವರೆಗೆ ನಡೆದ ಮಹತ್ವದ ಸಭೆಯಲ್ಲಿ ಆನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ನಿನ್ನೆ ರಾತ್ರಿ ತಡವಾಗಿ ಆಗಮಿಸಿದ್ದ ಅಮಿತ್ ಷಾ ನೇರವಾಗಿ ಮಂಗಳೂರಿನ ಮಣ್ಣಗುಡ್ಡ ದಲ್ಲಿರುವ ಸಂಘನಿಕೇತನಕ್ಕೆ ತೆರಳಿದ್ದರು.
ಆರ್ ಎಸ್ ಎಸ್ ನ ದಕ್ಷಿಣ ದ ಶಕ್ತಿಕೇಂದ್ರ ಸಂಘನಿಕೇತನ ದಲ್ಲಿ ಅಮಿತ್ ಷಾ ಹಾಗೈ ಆರ್ ಎಸ್ ಎಸ್ ಪ್ರಚಾರಕ್ ಪ್ರಮುಖರೊಂದಿಗೆ ತಡ ರಾತ್ರಿ 2 ಗಂಟೆ ವರೆಗೆ ಸಭೆ ನಡೆಸಿದ್ದಾರೆ.
ಸತತ 5 ಗಂಟೆಗಳ ಕಾಲ ಆರ್‌ಎಸ್ಎಸ್ ಮುಖಂಡರ ಜತೆ ಅಮಿತ್ ಷಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಆರ್ ಎಸ್ ಎಸ್ ಪ್ರಮುಖರಾದ ಭಯ್ಯಾಜಿ ಜೋಶಿ, ಮುಕುಂದ್ , ಸಂತೋಷ್ ಸೇರಿದಂತೆ 4 ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳು ಪಾಲ್ಗೊಂಡಿದ್ದು, ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಅಯೋಧ್ಯ ರಾಮ ಮಂದಿರ ನಿರ್ಮಾಣ ಕುರಿತ ವಿಚಾರ ಪ್ರಮುಖ ವಿಷಯವಾಗಿ ಕೈಗೊಳ್ಳಲು ಆರ್ ಎಸ್ ವರಿಷ್ಟರು ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಘನಿಕೇತನದಲ್ಲಿ ನಡೆದ ಸಭೆಯಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ದ ಆರ್‌ಎಸ್‌ಎಸ್ ಪ್ರಮುಖರ ಜತೆಯೂ ಅಮಿತ್ ಷಾ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಾಗು ಶಬರಿಮಲೆ ಹೋರಾಟ , ಸೇರಿದಂತೆ ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಆರ್ ಎಸ್ ಎಸ್ ಮುಖಂಡರು ಅಮಿತ್ ಶಾ ಅವರಿಗೆ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ ಎಂದು ಆರ್ ಎಸ್ ಎಸ್ ಮೂಲಗಳು ತಿಳಿಸಿವೆ.ಇಂದು ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಹಿಂದಿರುಗಿದರು.
ವಿಡಿಯೋ…