DAKSHINA KANNADA
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಕೇಂದ್ರ ಸರಕಾರದ ಮುತುವರ್ಜಿಯಲ್ಲಿ ನಿರ್ಮಾಣ- ಪ್ರಧಾನಿ ನರೇಂದ್ರ ಮೋದಿ
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಕೇಂದ್ರ ಸರಕಾರದ ಮುತುವರ್ಜಿಯಲ್ಲಿ ನಿರ್ಮಾಣ- ಪ್ರಧಾನಿ ನರೇಂದ್ರ ಮೋದಿ
ಮಂಗಳೂರು, ಫೆಬ್ರವರಿ 04: ನೂರಾರು ವರ್ಷಗಳ ವಿವಾದದ ಕೇಂದ್ರವಾಗಿದ್ದ ರಾಮಜನ್ಮಭೂಮಿ ವಿವಾದ ಇದೀಗ ಅಂತ್ಯಗೊಂಡಿದ್ದು, ಕೇಂದ್ರ ಸರಕಾರ ಇದೀಗ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸ್ವಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಈ ರಾಮಜನ್ಮಭೂಮಿ ವಿಚಾರವಾಗಿ ಮಾತನಾಡಿದ ಅವರು ರಾಮಮಂದಿರ ನಿರ್ಮಾಣ ವಿಚಾರವಾಗಿ ಇದ್ದಂತಹ ಎಲ್ಲಾ ವಿವಾದಗಳೂ ಅಂತ್ಯಗೊಂಡಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸಿದ್ದು, ಭವ್ಯ ರಾಮ ಮಂದಿರ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಗತ್ಯ ವಿಚಾರಗಳನ್ನು ಈ ಟ್ರಸ್ಟ್ ಮೂಲಕ ನಿರ್ವಹಿಸಲಾಗುವುದು ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ರಾಮಜನ್ಮಭೂಮಿಗೆ ಸಂಬಂಧಪಟ್ಟ 67.70 ಎಕರೆ ಜಮೀನಿನಲ್ಲಿ ರಾಮಮಂದಿರ ಹಾಗೂ ಇತರ ವ್ಯವಸ್ಥೆಗಳು ನಿರ್ಮಾಣಗೊಳ್ಳಲಿದೆ.
ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಜಮೀನು ನೀಡುವ ಕುರಿತೂ ಕೇಂದ್ರ ಸರಕಾರ ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಉತ್ತರಪ್ರದೇಶ ಸರಕಾರದೊಂದಿಗೂ ಮಾತುಕತೆ ನಡೆಸಿದೆ ಎಂದು ಅವರು ಹೇಳಿದ್ದಾರೆ.