LATEST NEWS
ರಾಮ್ ರಹೀಂ ಗೆ ಇಂದು ಶಿಕ್ಷೆ ಪ್ರಕಟ: ‘ಕಂಡಲ್ಲಿ ಗುಂಡು’ ಎಚ್ಚರಿಕೆ!
ರೋಹ್ಟಕ್, ಅಗಸ್ಟ್ 28: ಅತ್ಯಾಚಾರ ಪ್ರಕರಣದ ದೋಷಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಇಂದು ಅಪರಾಹ್ನ ಶಿಕ್ಷೆ ಪ್ರಮಾಣವನ್ನು ಹರಿಯಾಣದ ಸಿಬಿಐ ವಿಶೇಷ ಕೋರ್ಟ್ ಪ್ರಕಟಿಸಲಿದೆ.
ಈ ಹಿನ್ನಲೆಯಲ್ಲಿ ಹರ್ಯಾಣದಲ್ಲಿ ಬೀಗಿ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ರೋಹ್ಟಕ್ ಜಿಲ್ಲಾಧಿಕಾರಿ ಹಿಂಸಾಚಾರಕ್ಕೆ ಇಳಿಯವ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಮುಂದಾಗುವ ಕಿಡಿಗೇಡಿಗಳಿಗೆ ಶೂಟ್ ಅಂಡ್ ಸೈಟ್ ವಾರ್ನಿಂಗ್ ನೀಡಿದ್ದಾರೆ.
ಆಗಸ್ಟ್ 25ರಂದು ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ದೋಷಿ ಎಂದು ಹರಿಯಾಣದ ಸಿಬಿಐ ವಿಶೇಷ ಕೋರ್ಟ್ ಪ್ರಕಟಿಸಿದ ಬಳಿಕ ಭಾರಿ ಹಿಂಸಾಚಾರ ನಡೆದಿತ್ತು. ಗುರ್ಮೀತ್ ಬೆಂಬಲಿಗರು ಗಲಭೆ ನಡೆಸಿದ್ದರು. ಈ ಗಲಭೆ ಹಿಂಸಾಚಾರದಲ್ಲಿ 38 ಮಂದಿ ಸಾವನ್ನಪ್ಪಿದ್ದರೆ, 250ಕ್ಕೂ ಮಂದಿ ಗಾಯಗೊಂಡಿದ್ದಾರೆ.
ಇಂದು ಗುರ್ಮೀತ್‌ನನ್ನು ಇರಿಸಲಾಗಿರುವ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲೇ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ. ಇಂದು ಮಧ್ಯಾಹ್ನ 2:30ರ ಸುಮಾರಿಗೆ ಅತ್ಯಾಚಾರಿ ಗುರ್ಮೀತ್‌ಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಅಗಸ್ಟ್ 25 ರಂದು ನಡೆದ ಗಲಭೆ ಮತ್ತೆ ಮರುಕಳಿಸಬಾರದೆಂದು , ಹರಿಯಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸೇನಾ ಪಡೆ,ಅರೆಸೇನಾ ಪಡೆಗಳು,ಹಾಗೂ ವಿಶೇಷ ಭದ್ರತಾ ಪಡೆಗಳು ಪ್ರಮುಖ ಸ್ಥಳಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ರೋಹ್ಟಕ್ ನಲ್ಲಿ ಭಾನುವಾರ ಜಿಲ್ಲಾಡಳಿತ ಮಹತ್ವದ ಸಭೆ ನಡೆಸಿದ್ದು , ಯಾವುದೇ ಹಿಂಸಾಚಾರ , ಗಲಭೆ ನಡೆಸುವವರ ವಿರುದ್ದ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.