LATEST NEWS
ಮತ್ತೆ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಮತ್ತೆ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ ಅಗಸ್ಟ್ 23: ಉಳಿದವರು ಕಂಡಂತೆ ಸಿನೆಮಾದಲ್ಲಿ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿ ಟ್ರೆಂಡ್ ಸೆಟ್ ಮಾಡಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ಮತ್ತೆ ಹುಲಿಕುಣಿತಕ್ಕೆ ಹೆಜ್ಜೆ ಹಾಕಿದ್ದಾರೆ. ಆದರೆ ಸಿನೆಮಾಗೆ ಅಲ್ಲ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡದ ಜೊತೆ ಹೆಜ್ಜೆ ಹಾಕಿದರು.
ಮೂಲತಹ ಉಡುಪಿಯವರಾದ ರಕ್ಷಿತ್ ಶೆಟ್ಟಿ ತಮ್ಮ ಹಿಂದಿನ ಸಿನೆಮಾ ಉಳಿದವರಂತೆ ಸಿನೆಮಾದಲ್ಲಿ ಹುಲಿವೇಷಕ್ಕೆ ಹೆಜ್ಜೆ ಹಾಕಿ ಚಿತ್ರರಂಗದಲ್ಲೆ ಟ್ರೆಂಡ್ ಹುಟ್ಟುಹಾಕಿದ್ದರು.

ಆ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ್ದ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಹುಲಿವೇಷ ಹಾಕಿದ್ದು, ಇಂದು ಕೊರಂಗ್ರಪಾಡಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ತಮ್ಮ ಮೊದಲ ಹಜ್ಜೆ ಹಾಕಿದ್ದರು. ಈ ಕುಣಿತಕ್ಕೆ ರಕ್ಷಿತ್ ಶೆಟ್ಟಿ ಕೂಡಾ ಆಗಮಿಸಿ ಹೆಜ್ಜೆ ಹಾಕಿದ್ದಾರೆ. ಟೀ ಶರ್ಟ್ – ಜೀನ್ಸ್ ತೊಟ್ಟಿದ್ದ ಕಿರಿಕ್ ಪಾರ್ಟಿ ನಾಯಕ ತಾಸೆಯ ಪೆಟ್ಟಿಗೆ ಯಾವುದೇ ಅಳುಕಿಲ್ಲದೇ ಹೆಜ್ಜೆ ಹಾಕಿದರು.