Connect with us

FILM

ಸಿನಿಮಾ ಇಂಡಸ್ಟ್ರಿಗೆ ದಾರಿ ತೋರಿಸಿದ್ದೆ ರಕ್ಷಿತ್ ಹಾಗೂ ರಿಷಬ್ : ರಶ್ಮಿಕಾ ಮಂದಣ್ಣ

ಬೆಂಗಳೂರು, ಜನವರಿ 18: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಇತ್ತೀಚಿಗೆ ಹಲವಾರು ಹೇಳಿಕೆಗಳಿಂದಾಗಿ ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದಾರೆ.

ಇದೀಗ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಗೆ ಮೊದಲ ಎರಡು ಸಿನಿಮಾಗಳ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ರಶ್ಮಿಕಾ ಯಾವುದೇ ಹಿಂಜರಿಕೆ ಇಲ್ಲದೆ ಉತ್ತರಿಸಿ, ರಕ್ಷಿತ್ ಹಾಗೂ ರಿಷಬ್ ಅವರು ಸಿನಿಮಾ ಇಂಡಸ್ಟ್ರಿಯ ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು.

ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಿದೆ. ಅವರು ವಿಶಾಲವಾಗಿ ಆಲೋಚಿಸುವುದನ್ನು ಹೇಳಿಕೊಟ್ಟರು. ನಾನು ನಾಲ್ಕು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಧನ್ಯವಾದ ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು. ಇದಕ್ಕೆ ಸಾಕಷ್ಟು ಟೀಕೆ ಬಂದಿತ್ತು. ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂದಿತ್ತು. ಇದೀಗ ಹೊಸ ಹೇಳಿಕೆಯಿಂದ ರಶ್ಮಿಕಾ ಮಂದಣ್ಣ ಟ್ರೋಲ್ ಗೆ ಗುರಿಯಾಗುವುದು ಕಡಿಮೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Advertisement
Click to comment

You must be logged in to post a comment Login

Leave a Reply